ಸೀಬೆ ಹಣ್ಣಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿದ್ದರೂ ಕೆಲವೊಂದು ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಇದು ಮಾರಕವಾಗಬಹುದು. ಸೀಬೆ ಹಣ್ಣನ್ನು ಯಾರು ತಿನ್ನಬಾರದು ಮತ್ತು ಕಾರಣ ಏನೆಂದು ಈ ಲೇಖನದಲ್ಲಿ ವಿವರಿಸಲಾಗಿದೆ.
ಪ್ರತಿಯೊಬ್ಬರು ಇಷ್ಟಪಡುವ ಹಣ್ಣು ಸೀಬೆ ಹಣ್ಣಾಗಿದ್ದು, ಇದನ್ನು ಸಾಮಾನ್ಯವಾಗಿ ಭಾರತೀಯರು ತಮ್ಮ ಮನೆಗಳ ಮುಂದೆ ಬೆಳೆಸುತ್ತಾರೆ. ನಾವು ಸಾಮಾನ್ಯವಾಗಿ ಬಹುಶಃ ಒಂದು ಪ್ಲೇಟ್ ಸೀಬೆಹಣ್ಣನ್ನು ಸ್ವಲ್ಪ ಚಾಟ್ ಮಸಾಲದೊಂದಿಗೆ ತಿನ್ನಲು ಇಷ್ಟಪಡುತ್ತೇವೆ. ಸೀಬೆಯನ್ನು ಹಿಂದಿಯಲ್ಲಿ ಅಮ್ರೂದ್ ಮತ್ತು ಮರಾಠಿಯಲ್ಲಿ ಪೆರು ಎಂದೂ ಕರೆಯುತ್ತಾರೆ. ಇದು ಅನೇಕ ಪ್ರಯೋಜನಗಳನ್ನು ಹಣ್ಣಾಗಿದೆ. ವೆನಿಜುವೆಲಾ, ಮೆಕ್ಸಿಕೋ, ಮತ್ತು ಕೊಲಂಬಿಯಾದಲ್ಲಿ ಉತ್ಪಾದನೆಯಾಗುವ ಉಷ್ಣವಲಯದ ಹಣ್ಣಾಗಿದೆ. ನಾವು ಈ ಹಣ್ಣಿನಿಂದ ಹಲವು ವಿವಿಧ ಆಹಾರಗಳನ್ನು ತಯಾರಿಸಬಹುದು ಉದಾ: ಅಮ್ರೂದ್ ಚಟ್ನಿ, ಜಾಮ್ ಮತ್ತು ಮುರಬ್ಬ ಈ ಎಲ್ಲ ತಿನಿಸುಗಳು ಬಾಯಲ್ಲಿ ನೀರೂರಿಸುವ ಭಕ್ಷ್ಯಗಳಾಗಿವೆ. ಹಣ್ಣುಗಳು ಮಾತ್ರವಲ್ಲ, ಎಲೆಗಳು ಕೂಡ ಹೃದಯದ ಆರೋಗ್ಯ, ಜೀರ್ಣಕ್ರಿಯೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಗೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಆದರೆ ಕೆಲವು ಗಂಭೀರ ಆರೋಗ್ಯ ಸ್ಥಿತಿ ಇರುವ ಜನರಿಗೆ ಈ ಹಣ್ಣು ಹಾನಿಕಾರಿ ಎಂಬುದು ನಿಮಗೆ ತಿಳಿದಿದೆಯೇ?
ಸೀಬೆ ಹಣ್ಣು ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು, ಕ್ಯಾರೋಟಿನ್ ಮತ್ತು ಪೊಟ್ಯಾಸಿಯಮ್ಗಳನ್ನು ಒಳಗೊಂಡಿದೆ . ಬಾಳೆಹಣ್ಣಿನಲ್ಲಿರುವಷ್ಟೇ ಪ್ರಮಾಣದ ಪೊಟ್ಯಾಸಿಯಂ ಅನ್ನು ಪೇರಳ (ಸೀಬೆ ಹಣ್ಣು) ಹೊಂದಿದೆ. ಇದು ಸುಮಾರು 80 ಪ್ರತಿಶತದಷ್ಟು ನೀರನ್ನು ಹೊಂದಿರುತ್ತದೆ ಮತ್ತು ಇದು ನಿಮ್ಮನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ. ಹಣ್ಣಿನ ಒಂದು ಭಾಗ 112 ಕ್ಯಾಲೋರಿಗಳು, 23 ಗ್ರಾಂ ಕಾರ್ಬೋಹೈಡ್ರೇಟ್ ಮತ್ತು 9 ಗ್ರಾಂ ಫೈಬರ್ ಅನ್ನು ಒಳಗೊಂಡಿರುತ್ತದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.ಸೀಬೆ ಹಣ್ಣಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿದ್ದರೂ ಕೆಲವೊಂದು ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಇದು ಮಾರಕವಾಗಬಹುದು. ಸೀಬೆ ಹಣ್ಣನ್ನು ಯಾರು ತಿನ್ನಬಾರದು ಮತ್ತು ಕಾರಣ ಏನೆಂದು ಈ ಲೇಖನದಲ್ಲಿ ವಿವರಿಸಲಾಗಿದೆ.
ಸೀಬೆ ಹಣ್ಣನ್ನು ಯಾರು ತಿನ್ನಬಾರದು?
ನೀವು ಹೊಟ್ಟೆ ಉಬ್ಬರಿಸುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದರೆ: ಸೀಬೆ ಹಣ್ಣುಗಳಲ್ಲಿ ವಿಟಮಿನ್ ಸಿ ಮತ್ತು ಫ್ರಕ್ಟೋಸ್ ಸಮೃದ್ಧವಾಗಿದೆ, ಇದರಿಂದಾಗಿ ನಮ್ಮ ದೇಹಕ್ಕೆ ಹೆಚ್ಚು ವಿಟಮಿನ್ ಸಿ ಅಥವಾ ಫ್ರಕ್ಟೋಸ್ ಅನ್ನು ಹೀರಿಕೊಳ್ಳಲು ಕಷ್ಟವಾಗುತ್ತದೆ ಇದರಿಂದ ಹೊಟ್ಟೆಯುಬ್ಬರ ಉಂಟಾಗುತ್ತದೆ.
ನೀವು ಕರುಳಿನ ಸಮಸ್ಯೆಯನ್ನು ಹೊಂದಿದ್ದರೆ: ಜೀರ್ಣಕ್ರಿಯೆ ಮತ್ತು ಮಲಬದ್ಧತೆಯನ್ನು ಸರಾಗಗೊಳಿಸುವಲ್ಲಿ ಸೀಬೆ ಹಣ್ಣು ಉತ್ತಮವಾಗಿದ್ದರೂ, ಸೀಬೆಹಣ್ಣನ್ನು ಅತಿಯಾಗಿ ಸೇವಿಸುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ, ವಿಶೇಷವಾಗಿ ನೀವು ವಿಪರೀತ ಕರುಳಿನ ಸಹಲಕ್ಷಣದಿಂದ ಬಳಲುತ್ತಿದ್ದರೆ. ಮಿತವಾಗಿ ತಿನ್ನವುದು ಉತ್ತಮ.ಮಧುಮೇಹಿಗಳು: ಮಧುಮೇಹಿಗಳಿಗೆ ಸೀಬೆ ಹಣ್ಣು ಅತ್ಯುತ್ತಮ ಹಣ್ಣು ಎಂದು ಹೇಳಲಾಗುತ್ತದೆ, ಆದರೆ ನೀವು ಸೀಬೆಹಣ್ಣು ಅನ್ನು ಸೇವಿಸುವಾಗ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನೀವು ಪರೀಕ್ಷಿಸಬೇಕು. ಒಂದು ಸೀಬೆಹಣ್ಣು 9 ಗ್ರಾಂ ನೈಸರ್ಗಿಕ ಸಕ್ಕರೆಯನ್ನು ಹೊಂದಿರುವುದರಿಂದ ಹೆಚ್ಚು ತಿನ್ನುವುದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ.
ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವ ಜನರು: ಊಟದ ನಡುವೆ ಸೀಬೆ ಹಣ್ಣನ್ನು ಸೇವಿಸುವುದು ಉತ್ತಮ ಉಪಾಯ, ಆದರೆ ಟಿಓಐ ನಲ್ಲಿನ ವರದಿಯ ಪ್ರಕಾರ, ರಾತ್ರಿ ವೇಳೆ ಈ ಹಣ್ಣನ್ನು ಸೇವಿಸಬಾರದು ಏಕೆಂದರೆ ಇದು ಶೀತ ಮತ್ತು ಕೆಮ್ಮಿಗೆ ಕಾರಣವಾಗಬಹುದು.
ಹಲ್ಲುನೋವು: ನೀವು ಈಗಾಗಲೇ ಹಲ್ಲುನೋವಿನಿಂದ ಬಳಲುತ್ತಿದ್ದರೆ, ಈ ಹಣ್ಣನ್ನು ಸಂಪೂರ್ಣವಾಗಿ ತ್ಯಜಿಸುವುದು ಉತ್ತಮ. ಮಾಗಿದ ಸೀಬೆ ಹಣ್ಣು ಹೆಚ್ಚು ಅಪಾಯಕಾರಿಯಾಗಿದೆ