Publish Date: Sun, 24 Mar 2019 (19:11 IST)
Updated Date: Sun, 24 Mar 2019 (19:17 IST)
ಈಚೆಗೆ ಒಂದು ಲೈಂಗಿಕ ಕ್ರೀಡೆಯು ಜನಪ್ರಿಯತೆ ಪಡೆದುಕೊಳ್ತಾ ಇದೆ. ಅದೇ ಉಷ್ಣಾಂಶ ರತಿಕ್ರೀಡೆ. ಶೇ. 35ರಷ್ಟು ಮಂದಿ ತಮ್ಮ ಲೈಂಗಿಕ ಜೀವನದಲ್ಲಿ ಉಷ್ಣಾಂಶದ ಆಟ ಪ್ರಯೋಗಿಸಿದ್ದಾರೆ. ಹೀಗಂತ ಲವ್ ಹನಿ ಮಾಡಿದಂತಹ ಇತ್ತೀಚಿನ ಸಮೀಕ್ಷೆಯು ಹೇಳಿದೆ.
ಏನಿದು ಉಷ್ಣಾಂಶ ರತಿ ಆಟ?
ಇದೊಂದು ಬಿಡಿಎಸ್ ಎಮ್ ತಂತ್ರ. ಲೈಂಗಿಕ ಕ್ರಿಯೆ ಪೂರ್ವ ಆಟವು ಉಷ್ಣತೆ ಅಥವಾ ತಂಪನ್ನು ಬಿಡುಗಡೆ ಮಾಡಿ ಚರ್ಮವನ್ನು ಉತ್ತೇಜಿಸುತ್ತದೆ ಮತ್ತು ಲೈಂಗಿಕ ಕ್ರಿಯೆ ಉತ್ತೇಜಿಸುತ್ತದೆ. ಕಣ್ಣಿಗೆ ಬಟ್ಟೆ ಕಟ್ಟಿ ಉಷ್ಭತೆಯನ್ನು ಆಟ ಆಡಲಾಗುತ್ತದೆ.
ಹೇಗೆ ಮಾಡೋದು?
ಉಷ್ಣಾಂಶದ ಆಟದಲ್ಲಿ ಐಸ್ ಕ್ಯೂಬ್ ಗಳು ಕೆಲಸ ಮಾಡುತ್ತದೆ. ಇದನ್ನು ಬಾಯಿಯೊಳಗೆ ಹಾಕಿ ಅದು ನಿಧಾನವಾಗಿ ಕರಗಲು ಬಿಡಿ. ಐಸ್ ಕ್ಯೂಬ್ ನೀವು ಬಯಸಿದಾಗ ಉತ್ತೇಜವನ್ನು ಉಂಟುಮಾಡುವುದು. ಐಸ್ ಕ್ಯೂಬ್ ನ ಆಟವು ನಿಮ್ಮ ಜತೆಗಾರರೊಂದಿಗೆ ಹೆಚ್ಚಿನ ಆನಂದ ನೀಡುವುದು. ಐಸ್ ಪ್ಯಾಕನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಮತ್ತೊಂದನ್ನು ದೇಹದ ಉಷ್ಣತೆಯಲ್ಲಿರಲಿ. ಕೈಯನ್ನು ಬದಲಾಯಿಸುತ್ತಾ ಇದ್ದರೆ ಆ ಅನುಭವವು ತುಂಬಾ ಶ್ರೇಷ್ಠ.
ರತಿಕ್ರೀಡೆಯಲ್ಲಿ ಮಹತ್ವ ಏಕೆ?
ಚರ್ಮದ ನರಗಳನ್ನು ಬಳಸಿಕೊಂಡು ಉದ್ರೇಕ ಹೆಚ್ಚಿಸುವುದು ಉಷ್ಣಾಂಶ ಆಟದ ಮುಖ್ಯ ಉದ್ದೇಶ. ಲೈಂಗಿಕ ಕ್ರಿಯೆ ಪೂರ್ವ ಆಟದ ವೇಳೆ ಮಾಡುವಂತಹ ತಂಪು ಅಥವಾ ಬಿಸಿಯಿಂದ ಆಗುವಂತಹ ಉತ್ತೇಜನವು ಉದ್ರೇಕ ಹೆಚ್ಚಿಸುವುದು. ಉಷ್ಣಾಂಶದ ಆಟವು ಸ್ವೀಕರಿಸುವವರಿಗೆ ತುಂಬಾ ಆನಂದ ಉಂಟು ಮಾಡುತ್ತದೆ. ತಂಪು ಹಾಗೂ ಉಷ್ಣತೆಯನ್ನು ಊಹಿಸಲಾರದ ರೀತಿಯಲ್ಲಿ ಜತೆ ಸೇರಿಸಲಾಗಿರುತ್ತದೆ. ಹೀಗಾಗಿ ಉಷ್ಣಾಂಶದ ಆಟ ರತಿಕ್ರೀಡೆಯಲ್ಲಿ ಇತ್ತೀಚೆಗೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ.