ಬೆಂಗಳೂರು : ಹಣ್ಣು, ಆರೋಗ್ಯಕ್ಕೆ ಎಷ್ಟು ಒಳ್ಳೇಯದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಕಸದ ಬುಟ್ಟಿಗೆ ಎಸೆಯುವ ಅವುಗಳ ಜೀಜದಲ್ಲಿಯೂ ಕೂಡ ಉತ್ತಮವಾದ ಔಷಧಿಯ ಗುಣವಿದೆ ಎಂಬುದು ಕೆಲವರಿಗೆ ತಿಳಿದಿಲ್ಲ.
ಹೌದು. ಕಲ್ಲಂಗಡಿ ಬೀಜ ಬಹಳ ಒಳ್ಳೆಯದು. ಹಾಲು ಅಥವಾ ನೀರಿನ ಜೊತೆ ಸೇವನೆ ಮಾಡಬಹುದು. ಇದು ನಿಮ್ಮ ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆ.
ಮಾವಿನ ಗೊರಟೆಯನ್ನು ತಿನ್ನೋದಿಕ್ಕೆ ಸಾಧ್ಯವಿಲ್ಲ. ಆದರೆ ಮಲಬದ್ಧತೆ ಕಾಣಿಸಿಕೊಂಡಾಗ ಅದರ ಒಳಗಿರುವ ಬೀಜವನ್ನು ತೆಗೆದು ಪುಡಿ ಮಾಡಿ ಬೆಳಿಗ್ಗೆ ಅಥವಾ ರಾತ್ರಿ ನೀರಿನ ಜೊತೆ ಪುಡಿಯನ್ನು ಸೇವಿಸಿದರೆ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.
ತೂಕ ಕಡಿಮೆಯಾಗಲು ದಾಳಿಂಬೆ ಬೀಜ ಸಹಕಾರಿ. ಜೊತೆಗೆ ಚರ್ಮ ಸಂಬಂಧಿ ಸಮಸ್ಯೆಯಿಂದಲೂ ನಮಗೆ ನೆಮ್ಮದಿ ಸಿಗುತ್ತದೆ. ಹಾಗೇ ಹಲಸಿನ ಬೀಜದಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಇದನ್ನು ಸೇವನೆ ಮಾಡಿದರೆ ದೇಹದ ತೂಕ ಕಡಿಮೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.