Publish Date: Sun, 24 Mar 2019 (20:00 IST)
Updated Date: Sun, 24 Mar 2019 (20:02 IST)
ಸಂಭೋಗವೆನ್ನುವುದು ಅತ್ಯಂತ ಸಂತಸದಿಂದ ಗಂಡು ಹೆಣ್ಣುಗಳೆರಡು ಬಾಳಿನ ಸಾಮರಸ್ಯ ಕಾಯ್ದುಕೊಳ್ಳಲು ಕಳೆಯುವ ಕಾಲ. ಅಲ್ಲಿ ಇಬ್ಬರಲ್ಲಿಯೂ ಸಂಭೋಗಕ್ಕೆ ಸಮ್ಮತವಿರಬೇಕು. ಮಿಲನ ಮಹೋತ್ಸವವೆಂಬುದು ಬಲವಂತದ ಮಾಘಸ್ನಾನವಾಗಬಾರದು. ಎರಡು ದೇಹಗಳು ಒಂದಾಗುವ ಭರದಲ್ಲಿ ಬದುಕೇ ಛಿದ್ರಛಿದ್ರವಾಗಬಾರದು.
ಗಂಡ ಹೆಂಡಿರಿಬ್ಬರು ಸಂಭೋಗಕ್ಕೆ ಇಳಿಯಲೇಬಾರದಾಗ ಕಾರಣಗಳೂ ಇವೆ.
ಪ್ರಣಯ ಪಲ್ಲವಿಸುವ ಹೊತ್ತಿನಲ್ಲಿ ಎರಡು ಮನಸುಗಳು ಸಂಭೋಗಕ್ಕಾಗಿ ಶ್ರುತಿಗೊಂಡಿರಬೇಕು. ಬಲವಂತವಾಗಿಯಾದರೂ ಸರಿ ಸಂಭೋಗ ನಡೆಸದಿರುವುದೇ ಲೇಸು.
ಮೊಣಕಾಲಿಗೆ ಗಾಯವಾದಾಗ, ಕೈ ತರಚಿದಾಗ, ಸೊಂಟ ವಿಪರೀತ ಉಳುಕಿದಾಗ, ಬೆನ್ನು ಸಂಭೋಗಕ್ಕೆ ಸಹಕರಿಸದಾದಾಗ ಪರಸ್ಪರ ಮಾತನಾಡಿಕೊಂಡು ಪ್ರಣಯಕೇಳಿಯನ್ನು ಮುಂದೂಡುವುದು ಒಳಿತು.
ದುಃಖದಲ್ಲಿರುವವರನ್ನು ಅವರಷ್ಟಕ್ಕೆ ಅವರನ್ನು ಬಿಟ್ಟು, ಲಗಾಮಿಲ್ಲದ ಕಾಡು ಕುದುರೆಯಂತಾದ ಮನಸನ್ನು ನಾವೇ ಹದ್ದುಬಸ್ತಿನಲ್ಲಿ ಇಡಬೇಕು. ಸಾಧ್ಯವಾದರೆ ಕೆಲ ಸಾಂತ್ವದ ನುಡಿಗಳನ್ನು ಹೇಳಿ, ದುಃಖಿತರ ಮನಸನ್ನು ತಿಳಿ ಮಾಡಿ.
ಹೆಣ್ಣಿಗೆ ಕಾಮಕೇಳಿಯಲ್ಲಿ ಎಳ್ಳಷ್ಟೂ ಮನಸ್ಸಿಲ್ಲದಿದ್ದರೂ ಬಲವಂತವಾಗಿ ಸಂಭೋಗಕ್ಕೆ ಎಳೆಯುವುದು ಅತ್ಯಾಚಾರಕ್ಕೆ ಸರಿಸಮ. ಇದರಿಂದ ದೇಹಕ್ಕೆ ಮಾತ್ರ ಗಾಯವಾಗುವ ಸಾಧ್ಯ ಇರುವುದಿಲ್ಲ, ಮನಸ್ಸಿಗೂ ಮಾಯದ ಗಾಯವಾಗುವ ಸಾಧ್ಯತೆ ಇರುತ್ತದೆ.