ಬೆಂಗಳೂರು: ಮದ್ಯಪಾನದಿಂದ ಹಲವು ರೋಗಗಳಿಗೆ ಕಾರಣ ಎಂದು ಈ ಹಿಂದೆ ಹಲವು ಅಧ್ಯಯನ ವರದಿಗಳಿಂದ ತಿಳಿದುಬಂದಿದೆ. ಇದೀಗ ಆ ಅಧ್ಯಯನ ವರದಿಗಳಿಗೆ ಮತ್ತಷ್ಟು ಬಲ ನೀಡುವಂತೆ ಫಲಿತಾಂಶವನ್ನು ಮತ್ತೊಂದು ಸಮೀಕ್ಷಾ ವರದಿ ನೀಡಿದೆ.
ಹೊಸ ವರದಿ ಪ್ರಕಾರ ಮದ್ಯಪಾನ ಒಟ್ಟು ಏಳು ವಿಧದ ಕ್ಯಾನ್ಸರ್ ಗೆ ಕಾರಣವಾಗಬಹುದಂತೆ! ಇದಕ್ಕೆ ಕಾರಣ ಮದ್ಯದಲ್ಲಿರುವ ಇಥನಾಲ್ ಅಂಶ ಡಿಎನ್ ಎಗೆ ಸೇರಿಕೊಂಡು ಉಂಟು ಮಾಡುವ ರಾಸಾಯನಿಕ ಪ್ರಕ್ರಿಯೆ ಎಂದು ತಿಳಿದುಬಂದಿದೆ.
ಇದು ರಕ್ತ ಕಣದಲ್ಲಿರುವ ಡಿಎನ್ ಎ ಯನ್ನು ಹಾಳುಗೆಡವುತ್ತದೆ. ಇದರಿಂದಾಗಿ ಆರೋಗ್ಯಕರ ಡಿಎನ್ ಎ ರೋಗ ಪೀಡಿತವಾಗುತ್ತದೆ. ಇದು ಕ್ಯಾನ್ಸರ್ ಗೆ ನಾಂದಿಯಾಗುತ್ತದೆ ಎಂದು ಹೊಸ ಅಧ್ಯಯನ ವರದಿಯೊಂದು ತಿಳಿಸಿದೆ. ಹೀಗಾಗಿ ಇನ್ನು ಮುಂದೆ ಮದ್ಯಪಾನ ಮಾಡುವ ಮುನ್ನ ಯೋಚಿಸುವುದು ಒಳಿತು!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ