ಬೆಂಗಳೂರು: ಆಧುನಿಕ ಯುಗದಲ್ಲಿ ಕೆಟ್ಟ ಹವ್ಯಾಸಗಳ ವಿಚಾರದಲ್ಲೂ ಮಹಿಳೆಯರು ಪುರುಷರಿಗಿಂತ ಕಮ್ಮಿಯೇನಲ್ಲ. ಮಹಿಳೆಯರೂ ಪುರುಷರನ್ನು ಮೀರಿಸುವಂತೆ ಧೂಮಪಾನ, ಮದ್ಯಪಾನ ಮಾಡುತ್ತಾರೆ.
ಆದರೆ ಧೂಮಪಾನ ಮಾಡುವ ಮಹಿಳೆಯರಿಗೆ ಶಾಕಿಂಗ್ ನೀಡುವ ಸುದ್ದಿಯೊಂದನ್ನು ಸಂಶೋಧಕರು ನೀಡಿದ್ದಾರೆ. ಧೂಮಪಾನದ ಕೆಟ್ಟ ಪರಿಣಾಮ ಪುರುಷರಿಗಿಂತಲೂ ಮಹಿಳೆಯರ ಮೇಲೆ ಹೆಚ್ಚು ಪ್ರಭಾವ ಬೀರಬಹುದು ಎಂದು ಹೊಸ ಅಧ್ಯಯನ ತಿಳಿಸಿದೆ.
ಅದರಲ್ಲೂ ಶ್ವಾಸಕೋಶ ಕ್ಯಾನ್ಸರ್, ಹೃದಯದ ರಕ್ತನಾಳಗಳಲ್ಲಿ ಸಮಸ್ಯೆಯಂತಹ ಗಂಭೀರ ಖಾಯಿಲೆಗಳು ಪುರುಷರಿಗೆ ಹೋಲಿಸಿದರೆ ಧೂಮಪಾನ ಮಾಡುವ ಮಹಿಳೆಯರಿಗೆ ಹೆಚ್ಚು ಬರುವ ಸಾಧ್ಯತೆಯಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಹಾಗಾಗಿ ಧೂಮಪಾನ ಮಾಡುವ ಮಹಿಳೆಯರು ಇನ್ನು ಎಚ್ಚರವಾಗಿರುವುದು ಒಳಿತು!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ