Webdunia - Bharat's app for daily news and videos

Install App

ಅಕ್ಷಯ ತೃತೀಯಕ್ಕೆ ಗೋಲ್ಡ್ ಕೊಳ್ಳುತ್ತೀರಾ?

Webdunia
ಶುಕ್ರವಾರ, 29 ಏಪ್ರಿಲ್ 2022 (12:13 IST)
ಮನುಷ್ಯನ ಬದುಕಿನಲ್ಲಿ ಕೈಗಳ ಪಾತ್ರ ಮಹತ್ವದ್ದು. ಪ್ರತಿಯೊಂದು ಕೆಲಸದಲ್ಲಿ ಸದಾ ನಮಗೆ ಜೊತೆಗಾರರಾಗಿ ನಮ್ಮೊಂದಿಗಿರುತ್ತವೆ ನಮ್ಮೆರಡು ಕೈಗಳು.
 
ನಮ್ಮ ಜೀವನವನ್ನು ರೂಪಿಸುವ, ಜನರ ಜೊತೆಗೆ ಬಾಂಧವ್ಯ ಬೆಸೆಯಲು ಸಹಾಯ ಮಾಡುವ ಕೈಗಳನ್ನು ನಾವು ಸುಂದರವಾಗಿ ಕಾಣುವಂತೆ ನೋಡಿಕೊಳ್ಳಬೇಕು ಅಲ್ಲವೇ..? ಅದರಲ್ಲೂ, ಸ್ತ್ರೀಯರ ಕೈಗಳ ಸೌಂದರ್ಯ ಹೆಚ್ಚಿದಷ್ಟು ಅವರಿಗೆ ಅಧಿಕ ಸಂತೋಷ.

ಪ್ರತೀ ಬಳೆಯು ಒಂದೊಂದು ಕಥೆ ಹೇಳುತ್ತದೆ. ಒಬ್ಬರು ನೀಡಿದ ಉಡುಗೊರೆಯಾಗಿ, ಹಿರಿಯರ ಆಶೀರ್ವಾದವಾಗಿ, ಪತಿಯ ಒಲುಮೆಯಾಗಿ, ಸಹೋದರ ಸಹೋದರಿಯರ ಪ್ರೀತಿಯ ಸಂಕೇತವಾಗಿ, ನಮ್ಮದೇ ದುಡಿಮೆಯ ಫಲವಾಗಿ ಹೀಗೆ ಹತ್ತು ಹಲವು ಭಾವನೆಗಳ ರೂಪಗಳಲ್ಲಿ ಬಳೆಗಳು ನಮ್ಮನ್ನು ಸೇರಿರುತ್ತವೆ.

ಅವುಗಳು ನಮ್ಮ ಅದೃಷ್ಟ, ಆರೋಗ್ಯ ಮತ್ತು ಸಮೃದ್ಧಿಯ ಸಂಕೇತ. ಈ ಹಬ್ಬದ ಋತುವಿನಲ್ಲಿ ನಕಾಶಿಯಿಂದ ಹಿಡಿದು ಮೋಟಿಫ್ ವರೆಗೆ ನೀವು ನಿಮ್ಮಿಷ್ಟದ ವಿನ್ಯಾಸದ ಬಳೆಗಳನ್ನು ಕೊಳ್ಳುವ ಬಯಕೆ ಹೊಂದಿದ್ದರೆ, ನಿಮಗಾಗಿ ಅವುಗಳ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ.

1. ನಿಮ್ಮ ಆಭರಣದ ಪೆಟ್ಟಿಗೆಯಲ್ಲಿ, 22 ಕ್ಯಾರೆಟ್ ಚಿನ್ನದ, ಪಚ್ಚೆ ಮತ್ತು ನೀಲಮಣಿಗಳನ್ನು ಹೊಂದಿಸಿರುವ ಸುಂದರವಾದ ಆ್ಯಂಟಿಕ್ ಫಿನಿಶ್ ಇರುವ ಬಳೆಗಳು ಇರಲೇಬೇಕು. ಅವು ನಿಮ್ಮ ಕೈಗಳಿಗೆ ಸಾಂಪ್ರದಾಯಿಕ ಲುಕ್ ನೀಡುತ್ತವೆ. ಈ ಆನೆಯ ತಲೆಯ ಆಕೃತಿಯುಳ್ಳ ಸುಂದರವಾದ ಬಳೆಯು ನಕಾಶಿ ಕರಕುಶಲತೆಯನ್ನು ಹೊಂದಿರುವ ಪಾರಂಪರಿಕ ಆಭರಣವಾಗಿದೆ.

 

2. ದಿನನಿತ್ಯ ಧರಿಸಲು ಸಾಧ್ಯವಾಗುವಂತ, ಸರಳತೆ ಮತ್ತು ಸೊಬಗು ಎರಡನ್ನೂ ಹೊಂದಿರುವ ಇಂತಹ ಕ್ಲಾಸಿ ಬಳೆಗಳು, ಕಚೇರಿಗೆ ಹೋಗುವವರಲ್ಲಿ ಖಂಡಿತಾ ಇರಬೇಕು. ಈ ಬಳೆಗಳಲ್ಲಿ ಹಲವು ಆಸಕ್ತಿದಾಯಕ ಅಂಶಗಳಿವೆ.ಈ ಜೈಲ್ ಕಟ್ ಅಸಿಮೆಟ್ರಿಕ್ ಬಳೆಗಳು, ಸ್ಟೈಲಿಶ್ ಸಿಲೂಯೆಟ್ ವಿನ್ಯಾಸವನ್ನು ಹೊಂದಿವೆ. ಇವು ನಿತ್ಯದ ಜೀವನಕ್ಕೆ ಹೊಳಪು ನೀಡಬಲ್ಲವು.

3. ನಿಮ್ಮ ವ್ಯಕ್ತಿತ್ವವನ್ನು ಆಕರ್ಷಕ ರೀತಿಯಲ್ಲಿ ತೋರಿಸಲು ಈ ಚೂಪು ತುದಿಯ ಬಳೆಗಳು ಸೂಕ್ತ. ಅತ್ಯುತ್ತಮ ರೀತಿಯಲ್ಲಿ ರಚಿಸಲಾದ ಈ ಬಳೆಗಳು, ಜೈಲ್ ಕಟ್ ಮಾದರಿಗಳು ಮತ್ತು ಸ್ಟ್ಯಾಂಪ್ ವರ್ಕ್ನಂತಹ ಸಂಕೀರ್ಣವಾದ ಕೆಲಸಗಾರಿಕೆಗಳ ಸಮ್ಮಿಳನವನ್ನು ತೋರಿಸುತ್ತದೆ. ಸುಂದರವಾದ ಕುಂದನ್ಗಳನ್ನು ಅಳವಡಿಸಲಾದ ಈ 22 ಕ್ಯಾರೆಟ್ ಬಳೆಗಳನ್ನು ಧರಿಸಿದಾಗ, ನೋಡಿದವರು ಮತ್ತೊಮ್ಮೆ ತಿರುಗಿ ನೋಡುವುದರಲ್ಲಿ ಸಂಶಯವಿಲ್ಲ.

4. ಮಾಣಿಕ್ಯ ಮತ್ತು ಚಿನ್ನದ ಗೆಜ್ಜೆಗಳನ್ನು ಹೊಂದಿರುವ ಈ 22 ಕ್ಯಾರೆಟ್ ಚಿನ್ನದ ಬಳೆಗಳನ್ನು ಕೈಗಳಲ್ಲಿ ಧರಿಸಿದಾಗ, ನಿಮ್ಮ ಉಡುಪಿನ ಮೆರುಗು ಹೆಚ್ಚುವುದು ಖಚಿತ. ರೇಷ್ಮೆಯ ಗೌನ್ ಅಥವಾ ಸಾಂಪ್ರದಾಯಿಕ ಲೆಹಂಗಾಗಳ ಜೊತೆ ಈ ಬಳೆಗಳು ಚೆನ್ನಾಗಿ ಒಪ್ಪುತ್ತವೆ ಎಂಬುವುದರಲ್ಲಿ ಸಂಶಯವಿಲ್ಲ.

ಆ್ಯಂಟಿಕ್ ಫಿನಿಶ್ ಹೊಂದಿರುವ ಈ 22 ಕ್ಯಾರೆಟ್ ಚಿನ್ನದ ಬಳೆಗಳ ಸೊಬಗಿಗೆ ಕಾಲದ ಹಂಗಿಲ್ಲ. ಇದು ಹೂವಿನ ಮೋಟಿಫ್ಗಳಿಂದ ಸ್ಫೂರ್ತಿಯನ್ನು ಪಡೆದಿದ್ದು, ಅಚ್ಚುಕಟ್ಟಾದ ಸ್ಟ್ಯಾಂಪ್ ಕೆಲಸ ಮತ್ತು ಸುಂದರವಾದ ಕುಂದನ್ಗಳನ್ನು ಹೊಂದಿವೆ. ಈ ಬಳೆಗಳನ್ನು ಧರಿಸಿದಾಗ ನಿಮ್ಮ ಕೈಗಳ ಸೌಂದರ್ಯ ಇಮ್ಮಡಿಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಮುಂದಿನ ಸುದ್ದಿ
Show comments