Publish Date: Fri, 17 May 2019 (09:31 IST)
Updated Date: Fri, 17 May 2019 (09:32 IST)
ಚೆನ್ನೈ: ಬಹುಭಾಷಾ ತಾರೆ, ರಾಜಕಾರಣಿ ಕಮಲ್ ಹಾಸನ್ ಹಿಂದೂ ಉಗ್ರವಾದದ ಬಗ್ಗೆ ನೀಡಿದ ಹೇಳಿಕೆ ಇದೀಗ ಆಕ್ರೋಶಕ್ಕೆ ಕಾರಣವಾಗಿದೆ. ತಿರುಚಿಯಲ್ಲಿ ಕಮಲ್ ಹಾಸನ್ ಮೇಲೆ ಕಲ್ಲುತೂರಾಟ ನಡೆಸಲಾಗಿದೆ.
ತಿರುಚಿಯಲ್ಲಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಬಂದ ಕಮಲ್ ಹಾಸನ್ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ. ಮೊದಲ ಭಯೋತ್ಪಾದಕ ಹಿಂದೂ ಆಗಿದ್ದರು ಎಂದು ಕಮಲ್ ಇತ್ತೀಚೆಗೆ ಹೇಳಿಕೆ ನೀಡಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಮಲ್ ಹಾಸನ್ ‘ನಾನು ತಪ್ಪಾಗಿ ಏನೂ ಹೇಳಿಲ್ಲ. ಎಲ್ಲಾ ಧರ್ಮದಲ್ಲೂ ಉಗ್ರವಾದಿಗಳಿದ್ದಾರೆ. ಒಂದು ವೇಳೆ ನಾನು ನಾಥೂರಾಂ ಗೋಡ್ಸೆ ಬಗ್ಗೆ ಹೇಳಿದ್ದರಲ್ಲಿ ತಪ್ಪಿದ್ದರೆ ನನ್ನನ್ನು ಬಂಧಿಸಲಿ’ ಎಂದು ಸವಾಲೆಸೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ