Publish Date: Wed, 24 Apr 2019 (10:17 IST)
Updated Date: Wed, 24 Apr 2019 (10:18 IST)
ನವದೆಹಲಿ: ಸಾಧ್ವಿ ಪ್ರಗ್ಯಾ ಸಿಂಗ್ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಒಬ್ಬ ಹಿಂದೂ ಯಾವತ್ತೂ ಭಯೋತ್ಪಾದಕನಾಗಲು ಸಾಧ್ಯವಿಲ್ಲ ಎಂದಿದ್ದಾರೆ.
ಬಿಜೆಪಿ ಭೋಪಾಲ್ ಕ್ಷೇತ್ರದ ಅಭ್ಯರ್ಥಿಯಾಗಿರುವ ಸಾಧ್ವಿ ಮೇಲೆ ಮಾಲೆಗಾಂ ಸ್ಪೋಟ ಪ್ರಕರಣದ ಕೇಸ್ ನ್ನು ವಿನಾಕಾರಣ ಹಾಕಿ ಆಕೆಯನ್ನು ಒಬ್ಬ ಹಿಂದೂ ಭಯೋತ್ಪಾದಕಿ ಎಂದು ಬಿಂಬಿಸಲಾಗುತ್ತಿದೆ ಎಂದು ಅಮಿತ್ ಶಾ ಆರೋಪಿಸಿದ್ದಾರೆ.
‘ಒಬ್ಬ ಹಿಂದೂ ಯಾವತ್ತೂ ಭಯೋತ್ಪಾದಕರಾಗಲ್ಲ. ಸಾಧ್ವಿ ಏನೂ ತಪ್ಪು ಮಾಡಿಲ್ಲ. ವಿನಾಕಾರಣ ಅವರನ್ನು ಮಾಲೆಗಾಂ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಇದು ಮತ ಬ್ಯಾಂಕ್ ರಾಜಕೀಯ’ ಎಂದು ಅಮಿತ್ ಶಾ ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ