Publish Date: Thu, 04 Apr 2019 (16:28 IST)
Updated Date: Thu, 04 Apr 2019 (16:29 IST)
ಚುನಾವಣೆ ಸಂದರ್ಭದಲ್ಲಿ ಏನು ಬೇಕಾದರೂ ನಡೆಯಬಹುದು ಎನ್ನುವುದಕ್ಕೆ ಮತ್ತೆ ನಿದರ್ಶನ ಸಿಕ್ಕಿದೆ. ಕೆಪಿಸಿಸಿ ರಾಜ್ಯಾಧ್ಯಕ್ಷರಿಗೆ ಕೈ ಪಡೆಯ ಕಾರ್ಯಕರ್ತರು ಧಿಕ್ಕಾರ ಕೂಗಿದ್ದಾರೆ.
ದಿನೇಶ್ ಗುಂಡೂರಾವ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಗೆ ಧಿಕ್ಕಾರ ಕೂಗಿದ್ದಾರೆ ಕಾಂಗ್ರೆಸ್ಸಿಗರು.
ಕಾಂಗ್ರೆಸ್ ಕಾರ್ಯಕರ್ತರಿಂದಲೇ ನಾಯಕರ ವಿರುದ್ಧ ಧಿಕ್ಕಾರ ಘೋಷಣೆ ಮೊಳಗಿದೆ. ಸುಮಲತಾ ಬೆಂಬಲಿಸೋದಾಗಿ ಶ್ರೀರಂಗಪಟ್ಟಣ ಕಾಂಗ್ರೆಸ್ ಕಾರ್ಯಕರ್ತರ ನಿರ್ಣಯವಾಗಿದೆ.
ಕಾಂಗ್ರೆಸ್ ಉಚ್ಛಾಟಿತ ಮುಖಂಡ ಸಚ್ಚಿದಾನಂದ ನಿವಾಸದಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಹೀಗಾಗಿ ಸುಮಲತಾಗೆ ಬೆಂಬಲಿಸಿರುವ ಕಾರ್ಯಕರ್ತರು, ಕೆಪಿಸಿಸಿ ಅಧ್ಯಕ್ಷರಿಗೆ ಧಿಕ್ಕಾರ ಕೂಗಿದ್ದಾರೆ. ಮಂಡ್ಯ ತಾಲ್ಲೂಕಿನ ಇಂಡುವಾಳು ಗ್ರಾಮದಲ್ಲಿರುವ ಸಚ್ಚಿದಾನಂದ ನಡುವೆ ನಿವಾಸದಲ್ಲಿ ಕಾರ್ಯಕರ್ತರು ಸಭೆ ನಡೆಸಿದ್ರು.