Publish Date: Sun, 21 Apr 2019 (14:50 IST)
Updated Date: Sun, 21 Apr 2019 (14:52 IST)
ಕಟ್ಟಡ ಕಟ್ಟಿಸಿ ಗುತ್ತಿಗೆದಾರರಿಗೆ ಅನುಕೂಲ ಆಗಬೇಕು ಎನ್ನೋದಷ್ಟೇ ಜೆಡಿಎಸ್ ನಾಯಕರ ಉದ್ದೇಶವಾಗಿದೆ. ಯಾರು ಶಾಶ್ವತ ಅಲ್ಲ, ಹುಟ್ಟು ಆಕಸ್ಮಿಕ, ಸಾವು ಖಚಿತ. ಹೀಗಂತ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಚಿವ ಹೇಳಿದ್ದಾರೆ.
ಶಿವಮೊಗ್ಗ ದಲ್ಲಿ ಹಾಸನ ಬಿಜೆಪಿ ಅಭ್ಯರ್ಥಿ ಎ. ಮಂಜು ಹೇಳಿಕೆ ನೀಡಿದ್ದು, ನಿಜವಾದ ಜಾತಿ ತತ್ವ ಇಟ್ಟುಕೊಂಡಿರೋ ಜೆಡಿಎಸ್ ಜೊತೆ ಕಾಂಗ್ರೆಸ್ ಸೇರಿರೋದು ದುರಾದೃಷ್ಟಕರ ಎಂದರು.
ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ಸ್ವಯಂ ಘೋಷಿತ ಜೋಡೆತ್ತುಗಳು ಎಂದು ಟೀಕೆ ಮಾಡಿದ್ರು.
ಒಂದು ಕರಿ ಎತ್ತು ಒಂದು ಬಿಳಿ ಎತ್ತು, ಹೀಗಂತ ಡಿಕೆಶಿ, ಕುಮಾರಸ್ವಾಮಿ ಜೋಡಿ ಬಗ್ಗೆ ಎ. ಮಂಜು ವ್ಯಂಗ್ಯವಾಡಿದ್ರು.
ಜಾತಿ ಆಧಾರದಲ್ಲಿ ಮತ ಸೆಳೆಯೋದು ಸರಿಯಲ್ಲ. ಡಿಕೆಶಿ, ದೇವೇಗೌಡರು ಹಾಗೂ ಅವರ ಮಕ್ಕಳ ಹಿಂದೆ ಹೇಗಿದ್ರು ಈಗ
ಹೇಗಿದ್ದಾರೆ ನೋಡಿದ್ದೀವಿ. ಅವರು ಚುನಾವಣೆ ವೇಳೆ ಸಲ್ಲಿಸಿರೋ ಪ್ರಮಾಣ ಪತ್ರ ನೋಡಿದ್ದೀವಿ. ಡಿಕೆಶಿ, ದೇವೇಗೌಡರ ಕುಟುಂಬಗಳ ಆಸ್ತಿ ಹೆಚ್ಚಳದ ಬಗ್ಗೆ ಎ. ಮಂಜು ಪ್ರಶ್ನೆ ಮಾಡಿದ್ರು.
Jagadeesh
Publish Date: Sun, 21 Apr 2019 (14:50 IST)
Updated Date: Sun, 21 Apr 2019 (14:52 IST)