Publish Date: Sun, 21 Apr 2019 (13:09 IST)
Updated Date: Sun, 21 Apr 2019 (13:20 IST)
ಚುನಾವಣೆಗೋಸ್ಕರವೇ ಫಾರಿನ್ ನಿಂದ ಕ್ಯಾಂಡಿಡೇಟ್ ತಂದಿದ್ದಾರೆ. ಏಳು ದಿನಕ್ಕಾಗಿ ಇವರೆಲ್ಲ ಇಲ್ಲಿ ಬಂದಿದ್ದಾರೆ. ಹೀಗಂತ ಶಾಸಕ ಸಿಎಂಗೆ ಟಾಂಗ್ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಮೈತ್ರಿ ಪಕ್ಷಕ್ಕೆ ಸೊರಬ ಶಾಸಕ ಕುಮಾರ್ ಬಂಗಾರಪ್ಪ ಗುದ್ದು ನೀಡಿದ್ದಾರೆ. ಮೈತ್ರಿ ಅಭ್ಯರ್ಥಿ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸುಳ್ಳು ಹೇಳುತ್ತಿದ್ದಾರೆ. ನಾನು ಪಾದಯಾತ್ರೆ ಮಾಡಿದ್ದರಿಂದಲೇ ಬಂದಿದ್ದು ಅಂತ ಹೇಳ್ತಾ ಇದ್ರು. ಹೆಚ್. ಡಿ. ಕುಮಾರಸ್ವಾಮಿ ಈ ಹಿಂದೆ ಸಮಸ್ಯೆಗಳಿದ್ದ ಸಮಯದಲ್ಲಿ ಶಿವಮೊಗ್ಗಕ್ಕೆ ಬಂದಿರಲಿಲ್ಲ. ಚುನಾವಣೆ ಬಂದಾಗ ಇಲ್ಲಿ ತಂಡವೇ ಠಿಕಾಣಿ ಹೂಡಿದೆ ಎಂದು ವ್ಯಂಗ್ಯವಾಡಿದ್ರು.
ಇವರು ಬರೋದು ಚುನಾವಣೆಗೋಸ್ಕರವೇ ಎಂದ ಅವರು, ಏಳು ದಿನಕ್ಕೆ ಬಂದಿರೋರು ಇವರೆಲ್ಲ. ಕ್ಯಾಂಡಿಡೇಟ್ ಪಾಂಪ್ಲೆಟ್ ನಾನ್ಸೆನ್ ಸುಳ್ಳಿನ ಕಂತೆ ಎಂದು ಜರಿದರು.
ರೋಡು ಮಾಡಿದೆ, ಚರಂಡಿ ಮಾಡಿದೆ ಎಂದು ಮುದ್ರಿಸಿಕೊಂಡಿದ್ದಾರೆ ಎಂದು ಕುಮಾರ್ ಬಂಗಾರಪ್ಪ ಟೀಕೆ ಮಾಡಿದ್ದಾರೆ.