Publish Date: Sat, 06 Apr 2019 (09:37 IST)
Updated Date: Sat, 06 Apr 2019 (09:39 IST)
ಮಂಡ್ಯ: ಮಂಡ್ಯ ಲೋಕಸಭಾ ಕಣದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಪ್ರಚಾರದಿಂದ ದೂರವುಳಿಯಲಿದ್ದಾರೆ.
ಯುಗಾದಿ ಹಬ್ಬದ ನಿಮಿತ್ತ ಬೆಂಗಳೂರಿಗೆ ವಾಪಸಾಗಿರುವ ದರ್ಶನ್ ಮತ್ತು ಯಶ್ ಇಂದು ಪ್ರಚಾರ ನಡೆಸದೇ ಇರಲು ತೀರ್ಮಾನಿಸಿದ್ದಾರೆ. ಆದರೆ ಸುಮಲತಾ ಮಾತ್ರ ಮಂಡ್ಯದಲ್ಲಿ ಪ್ರಚಾರ ಮುಂದುವರಿಸಲಿದ್ದಾರೆ.
ಇನ್ನೊಂದೆಡೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕೂಡಾ ಇಂದು ಹಬ್ಬದ ನಿಮಿತ್ತ ಪ್ರಚಾರ ನಡೆಸುತ್ತಿಲ್ಲ. ಹಾಗಾಗಿ ಇಂದಿನ ಮಟ್ಟಿಗೆ ಮಂಡ್ಯ ಕಣ ಕೊಂಚ ತಣ್ಣಗಿರಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ