Publish Date: Fri, 12 Apr 2019 (15:12 IST)
Updated Date: Fri, 12 Apr 2019 (15:14 IST)
ಬಾಗಲಕೋಟೆ : ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ಒಬ್ಬ ತಲೆಹಿಡುಕ ಎಂದು ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪನವರು ಕಿಡಿಕಾರಿದ್ದಾರೆ.
ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ಪ್ರತಿಬಾರಿ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸುತ್ತಿದ್ದರು. ಈ ಕುರಿತು ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಇಬ್ರಾಹಿಮ್ನಂಥ ತಲೆಹಿಡುಕ ಏನು ಬೇಕಾದರೂ ಮಾತನಾಡ್ತಾರೆ ಅವರ ಬಗ್ಗೆ ಹೆಚ್ಚು ಮಾತನಾಡುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋದಿ ಅವರು ಹಿಂದೂ ಹೆಣ್ಮಕ್ಕಳು ಬೇರೆ ಅಲ್ಲ, ಮುಸಲ್ಮಾನ ಮತ್ತು ಕ್ರೈಸ್ತ ಹೆಣ್ಮಕ್ಕಳು ಬೇರೆ ಅಲ್ಲ, ಅವರೆಲ್ಲರೂ ತಮ್ಮ ಅಕ್ಕತಂಗಿಯರು ಎಂದು ಭಾವಿಸಿದ್ದಾರೆ. ತಲಾಖ್ ಮೂಲಕ ಮುಸಲ್ಮಾನ್ ಹೆಣ್ಮಕ್ಕಳು ನಿರ್ಗತಿಕರಾಗುವುದನ್ನು ತಡೆಯಲು ಮೋದಿ ಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.