Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಿಜೆಪಿಯವರು ಇವಿಎಂ ಹ್ಯಾಕ್ ಮಾಡಬಲ್ಲರು – ಅನುಮಾನ ವ್ಯಕ್ತಪಡಿಸಿದ ಜಿ.ಪರಮೇಶ್ವರ್

ಬಿಜೆಪಿಯವರು ಇವಿಎಂ ಹ್ಯಾಕ್ ಮಾಡಬಲ್ಲರು – ಅನುಮಾನ ವ್ಯಕ್ತಪಡಿಸಿದ ಜಿ.ಪರಮೇಶ್ವರ್
ತುಮಕೂರು , ಗುರುವಾರ, 18 ಏಪ್ರಿಲ್ 2019 (08:53 IST)
ತುಮಕೂರು : ಇಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಇದೀಗ ಡಿಸಿಎಂ ಜಿ.ಪರಮೇಶ್ವರ್ ಅವರು ಇವಿಎಂ ಮೆಷಿನ್ ಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.


ತುಮಕೂರಿನ ಹೆಗ್ಗೆರೆಯಲ್ಲಿ ಮತ ಚಲಾಯಿಸಿದ ಜಿ.ಪರಮೇಶ್ವರ್ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇವಿಎಂಗಳ ಬಗ್ಗೆ ನನಗೆ ಈಗಲೂ ಅನುಮಾನ ಇದೆ. ಇವಿಎಂ ಹ್ಯಾಕ್ ಮಾಡುವಂತಹ ಅನುಮಾನ ಇದೆ. ಬಿಜೆಪಿಯವರು ಇವಿಎಂ ಹ್ಯಾಕ್ ಮಾಡಬಲ್ಲರು ಎಂದು ಹೇಳಿದ್ದಾರೆ.


ಈಗಾಗಲೇ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಮತಗಟ್ಟೆ ಸೇರಿದಂತೆ ಹಲವೆಡೆ ಮತಯಂತ್ರದಲ್ಲಿ ದೋಷ ಕಂಡುಬಂದಿದ್ದು, ಅದನ್ನು ಸರಿಪಡಿಸಲು ಸಿಬ್ಬಂದಿಗಳು ಹರಸಾಹಸ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಹೆಲಿಕಾಪ್ಟರ್ ತಪಾಸಣೆ ಮಾಡಿದ ಚುನಾವಣಾಧಿಕಾರಿಯನ್ನು ಅಮಾನತು ಮಾಡಿದ್ಯಾಕೆ ಗೊತ್ತಾ?