ನವದೆಹಲಿ : ಲೋಕಸಮರಕ್ಕೆ ಇಡೀ ದೇಶವೇಸಜ್ಜಾಗಿದ್ದು, ಇಂದು ದೇಶದ 11 ರಾಜ್ಯಗಳ 95 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.
ಹೌದು. ಇವತ್ತು ಕರ್ನಾಟಕ ಸೇರಿ ದೇಶದ 11 ರಾಜ್ಯಗಳ 95 ಕ್ಷೇತ್ರಗಳಲ್ಲಿ ಹಾಗೂ 1 ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾನ ನಡೆಯಲಿದೆ. ಕರ್ನಾಟಕ 14 ಕ್ಷೇತ್ರ, ತಮಿಳುನಾಡು 38 ಕ್ಷೇತ್ರ, ಮಹಾರಾಷ್ಟ್ರ 10 ಕ್ಷೇತ್ರ, ಉತ್ತರಪ್ರದೇಶ 8 ಕ್ಷೇತ್ರ, ಅಸ್ಸಾಂ 5 ಕ್ಷೇತ್ರ, ಬಿಹಾರ 5 ಕ್ಷೇತ್ರ, ಒಡಿಶಾ 5 ಕ್ಷೇತ್ರ, ಛತ್ತೀಸ್‍ಗಢ 3 ಕ್ಷೇತ್ರ, ಪ. ಬಂಗಾಳ 3 ಕ್ಷೇತ್ರ, ಕಾಶ್ಮೀರ 2 ಕ್ಷೇತ್ರ, ಮಣಿಪುರ 1 ಕ್ಷೇತ್ರ, ಪುದಿಚೇರಿ 1 ಕ್ಷೇತ್ರದಲ್ಲಿ ಇಂದು ಚುನಾವಣೆ ನಡೆಯಲಿದೆ.
ಪೂರ್ವನಿಗದಿಯಂತೆ 13 ರಾಜ್ಯಗಳ 97 ಕ್ಷೇತ್ರಗಳಲ್ಲಿ ಮತದಾನ ನಡೆಯಬೇಕಿತ್ತು. ಆದರೆ ಕಾನೂನು ಮತ್ತು ಸುವ್ಯವಸ್ಥೆ ಸರಿಯಿಲ್ಲದ ಕಾರಣ ತ್ರಿಪುರಾದ ಒಂದು ಕ್ಷೇತ್ರದಲ್ಲಿ ಮತದಾನವನ್ನು ಏಪ್ರಿಲ್ 23ಕ್ಕೆ ಮುಂದೂಡಲಾಗಿದೆ. ಹಾಗೇ ಭಾರಿ ಪ್ರಮಾಣದ ಹಣ ಪತ್ತೆಯಾದ ಕಾರಣ ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಮತದಾನ ರದ್ದಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.