Publish Date: Tue, 02 Apr 2019 (17:32 IST)
Updated Date: Tue, 02 Apr 2019 (17:35 IST)
ಅಂಬರೀಶ್ ವಸತಿ ಸಚಿವರಾಗಿದ್ದಾಗ ಬಡವರಿಗೆ ಯಾಕ್ ಮನೆ ಕೊಡಿಸ್ಲಿಲ್ಲ. ಚುನಾವಣೆ ಬಳಿಕ ಸುಮಕ್ಕನೂ ಇರಲ್ಲ, ಪಮಕ್ಕನೂ ಇರಲ್ಲ ಅಂತ ಸಂಸದರೊಬ್ಬರು ವ್ಯಂಗ್ಯವಾಡಿದ್ದಾರೆ.
ಸುಮಲತಾ ವಿರುದ್ಧ ಮತ್ತೆ ಮಾತು ಮುಂದುವರೆಸಿದ ಸಂಸದ ಎಲ್. ಆರ್. ಶಿವರಾಮೇಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮದ್ದೂರು ತಾಲೂಕಿನ ಕೊಪ್ಪದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಸುಮಲತಾ ವಿರುದ್ಧ ಮಾತಿನ ಬಾಣ ಹರಿಬಿಟ್ಟರು.
ಆಗ ಗೌರಮ್ಮನ ಹಾಗೆ ಮನೆಲಿದ್ಬುಟ್ಟು, ಅಂಬರೀಶ್ ಸತ್ತಾಗ ಕುಮಾರಸ್ವಾಮಿಗೆ ಬುದ್ದಿ ಇಲ್ಲದೆ ಮಂಡ್ಯಗೆ ತಂದ ಟೈಂ ನಲ್ಲಿ ಜನ ನೋಡುದ್ರಲ್ಲಾ. ಓ ಹೋ ಇವರೆಲ್ಲಾ ಓಟ್ ಹಾಕ್ತಾರೆ ಅಂತ. ಇದು ಫೀಲ್ಮಿ ಸ್ಟೈಲ್ ನಲ್ಲಿ ನಡೀತಿದೆ ಎಂದ್ರು.
ಸುಮಲತಾ ಟೂರಿಂಗ್ ಟಾಕೀಸ್ ಹದಿನೆಂಟನೇ ತಾರೀಖಿನವರೆಗೂ ನಡೆಯುತ್ತೆ ಶೂಟಿಂಗ್. ಆ ಮೇಲೆ ಸುಮಕ್ಕನೂ ಇಲ್ಲ ಪಮಕ್ಕಾನೂ ಇಲ್ಲ ಎಂದು ಟಾಂಗ್ ನೀಡಿದ್ರು.
ಆ ಮೇಲೆ ಅವರನ್ನ ನೋಡಲು ಗಾಂಧಿನಗರಕ್ಕೆ ಹೋಗಬೇಕಾಗುತ್ತೆ. ಹುಡಕಲು ಹೋಗ್ತಿರಾ ಹೇಳಿ ಅಂತ ಜನರನ್ನು ಕೇಳಿದ್ರು.
ಈ ಟೂರಿಂಗ್ ಟಾಕೀಸ್ ನವರ ಹದಿನೆಂಟನೆ ತಾರೀಖು ಪ್ಯಾಕ್ ಮಾಡಿಸಿ ಕಳಿಸಬೇಕು. ಶೂಟಿಂಗ್ ಮಾಡಿದ ಸಿನಿಮಾ ಎಲ್ಲವೂ ಬಿಡುಗಡೆ ಆಗಲ್ಲ. ಹಾಗೆಯೇ ಇದು. ಇವತ್ತು ದರ್ಶನ್ ಬಂದವನಲ್ಲ. ಇವನೂ ನಾಯ್ಡು. ಸುಮಲತಾ ನಾಯ್ಡು. ಲೇ ಗೌಡ್ರು ಕತೆ ಏನಾಗಬೇಕ್ರೊ ಎಂದು ಕೇಳಿದ್ರು.
ನಾಯ್ಡುಗಳ ಮಯವನ್ನ ಮಂಡ್ಯದಲ್ಲಿ ಮಾಡಲು ಬಿಡಬಾರದು ಎಂದು ಟೀಕೆ ಮಾಡಿದ್ರು. ಅವಳ ಗಂಡನ ನಂಬಿಕೊಂಡೆ 20 ವರ್ಷ ಹಾಳು ಮಾಡ್ಕೊಂಡೆ ನಾನು ಎಂದ ಅವರು, 20 ವರ್ಷ ಅಧಿಕಾರದಿಂದ ವಂಚಿತರಾಗಿ ಕೂರಲು ಈ ಪುಣ್ಯಾತ್ಮನ ಪಾರ್ಟಿಗೆ ಕರೆತಂದಿದ್ದೇ ಕಾರಣ ಎಂದೂ ಟೀಕೆ ಮಾಡಿದ್ರು.
ಅಮರಾವತಿ ಚಂದ್ರಶೇಖರ್ ಅವರ ಮನೇಲಿ ಅಡುಗೆ ಮಾಡಿ ಹಾಕಿ ಹಾಕಿ ಸೋತೋಗಿದ್ದಾರೆ ಎಂದೂ ಟೀಕೆ ಮಾಡಿದ್ರು. ಸುಮಲತಾ ಮಂಡ್ಯದ ಗೌಡತಿ ಅಲ್ಲ ಎಂದು ಪದೇ ಪದೇ ಶಿವರಾಮೇಗೌಡ ಹೇಳಿದ್ರು.