Publish Date: Mon, 08 Apr 2019 (18:03 IST)
Updated Date: Mon, 08 Apr 2019 (18:05 IST)
ಹಬ್ಬದ ದಿನದಂದು ಭರ್ಜರಿ ಪ್ರಚಾರ ನಡೆಸಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಬಿಜೆಪಿ ಅಭ್ಯರ್ಥಿ ತೇಜಸ್ವಿ ಇಂದು ಸಹ ಸೂರ್ಯ ಉದಯಿಸುವುದಕ್ಕೂ ಮುನ್ನವೇ ಮತಯಾಚನೆಗೆ ಇಳಿದಿದ್ದರು. ಬೆಳಗ್ಗೆಯಿಂದಲೇ ಅಬ್ಬರದ ಪ್ರಚಾರದಲ್ಲಿ ಮಗ್ನರಾಗಿ ಮತದಾರರ ಗಮನ ಸೆಳೆದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ತೆರೆದ ವಾಹನದಲ್ಲಿ ಬೆಳಗ್ಗೆ 6 ಗಂಟೆಗೆ ಆರಂಭವಾದ ಚುನಾವಣಾ ರ್ಯಾಲಿಯು ರಾಜ್ ಕುಮಾರ್ ವಾರ್ಡ್, ಅಂಬೇಡ್ಕರ್ ಸ್ಟೇಡಿಯಂ, ಅಗ್ರಹಾರ ದಾಸರಹಳ್ಳಿ, ಗೋವಿಂದರಾಜನಗರ, ಅಮರಜ್ಯೋತಿನಗರ, ಕಾವೇರಿಪುರ, ಪಟ್ಟೇಗಾರ ಪಾಳ್ಯ, ಮೂಡಲಪಾಳ್ಯ, ನಾಗರಬಾವಿ, ಪ್ರಮುಖ ಬೀದಿಗಳಲ್ಲಿ ಮಿಂಚಿನ ಸಂಚಾರ ನಡೆಸಿದರು.
ತೇಜಸ್ವಿ ಸೂರ್ಯರವರಿಗೆ ಶಾಸಕ ವಿ.ಸೋಮಣ್ಣ, ಮಾಜಿ ಮೇಯರ್ ಶಾಂತಕುಮಾರಿ, ಉಮೇಶ್ ಶೆಟ್ಟಿ, ಅರುಣ್ ಸೋಮಣ್ಣ, ಬಿಬಿಎಂಪಿ ಬಿಜೆಪಿ ಸದಸ್ಯರು ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದ್ದರು.
ತೇಜಸ್ವಿ ಸೂರ್ಯ ರವರಿಗೆ ಮಹಿಳೆಯರನ್ನು ಒಳಗೊಂಡಂತೆ, ಬಿಜೆಪಿ ಕಾರ್ಯಕರ್ತರು ನೂರಾರು ದ್ವಿಚಕ್ರ ವಾಹನಗಳಲ್ಲಿ ಬೈಕ್ ರ್ಯಾಲಿ ನಡೆಸುವ ಮೂಲಕ ಬೆಂಬಲ ಸೂಚಿಸಿದರು.