Publish Date: Mon, 08 Apr 2019 (17:07 IST)
Updated Date: Mon, 08 Apr 2019 (17:09 IST)
ಬಿಜೆಪಿ ಚುನಾವಣಾ ಪ್ರಚಾರಕ್ಕೆ ಅಡ್ಡಿ ಪಡಿಸಿದ ಘಟನೆ ನಡೆದಿದೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ವಿರುದ್ಧ ಮಾತನಾಡಿದ್ದಕ್ಕೆ ಕೆಂಡಾಮಂಡಲವಾದ ಕಾರ್ಯಕರ್ತರೊಬ್ಬರು ಅಡ್ಡಿಪಡಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಈ ಘಟನೆ ನಡೆದಿದೆ. ದೇವೇಗೌಡರ ವಿರುದ್ಧ ಮಾತನಾಡಿದ್ರೆ ಗ್ರಾಮದಿಂದ ಹೊರ ಹೋಗಲ್ಲವೆಂದು ಧಮ್ಕಿ ಹಾಕಲಾಗಿದೆ.
ಪ್ರಚಾರ ಮಾಡದಂತೆ ಗ್ರಾಮದಿಂದ ಹೊರಹೋಗಲು ತಾಕೀತು ಮಾಡಲಾಗಿದೆ. ಬಸವರಾಜ್ ನಾಲ್ಕು ಭಾರಿ ಗೆದ್ದು ಏನ್ ಕಿಸಿದಿದ್ದಾನೆಂದು ನಿಂದನೆ ಮಾಡಲಾಗಿದೆ.
ಬಿಜೆಪಿ ಅಭ್ಯರ್ಥಿ ನಿಂದಿಸಿರುವ ವಿಡಿಯೋ ವೈರಲ್ ಆಗಿದೆ. ದೇವೇಗೌಡ ಪ್ರಧಾನಿಯಾಗಿದ್ದಾಗ ಕೈಗೊಂಡ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಿಪಡಿಸಿದ್ದಾರೆ ಗ್ರಾಮಸ್ಥರು.