Publish Date: Wed, 10 Apr 2019 (17:16 IST)
Updated Date: Wed, 10 Apr 2019 (17:18 IST)
ನಾನೇನು ಪೆದ್ದ ನಾ? ಉಳಿದವರ ಹಾಗೆ ನಾನೇನು ಪೆದ್ದನಲ್ಲ. ಹೀಗಂತ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಸಂಸದ ರಮೇಶ ಜಿಗಜಿಣಗಿ ಟಾಂಗ್ ನೀಡಿದ್ದಾರೆ.
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಗೆ ಟಾಂಗ್ ನೀಡಿದ್ದಾರೆ ಸಂಸದ ಜಿಗಜಿಣಗಿ. ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜಿಗಜಿಣಗಿ, ನಾನೇನು ಪೆದ್ದ ನಾ ಎಂದು ಕೇಳಿದ್ದಾರೆ. ಉಳಿದವರ ಹಾಗೆ ನಾನೇನು ಪೆದ್ದನಲ್ಲ. ನನಗೆ ಎಲ್ಲ ಸಮುದಾಯದವರು ಮತ ಹಾಕುತ್ತಾರೆ ಎಂದರು.
ವಿಧಾನ ಸಭಾ ಚುನಾವಣೆಯಲ್ಲಿ ಮುಸ್ಲಿಂಮರ ಮತ ನನಗೆ ಬೇಡಾ ಎಂದು ಯತ್ನಾಳ ಹೇಳಿಕೆ ನೀಡಿದ್ದರು. ಇದಕ್ಕೆ ಟಾಂಗ್ ನೀಡಿ, ಜಿಗಜಿಣಗಿ ನಾನೇನು ಪೆದ್ದನಲ್ಲ ನನಗೆ ಎಲ್ಲ ಸಮುದಾಯದವರು ಮತ ಹಾಕುತ್ತಾರೆ ಎಂದಿದ್ದಾರೆ.