ಬಿಬಿಎಂಪಿಗೆ ತೆರಿಗೆ ಪಾವತಿಯಲ್ಲಿ ವಂಚನೆ ಮಾಡಿದೆ ಎಂದು ಪಾಲಿಕೆಯ ಯಲಹಂಕ ವಲಯದ ರೆವಿನ್ಯೂ ವಿಭಾಗದ ಅಧಿಕಾರಿಗಳು ಇಂದು ಬೆಳಿಗ್ಗೆ ಮಾನ್ಯತಾ ಟೆಕ್‌ಪಾರ್ಕ್ ಮುಖ್ಯ ಗೇಟ್‌ಗೆ ಬೀಗಹಾಕಿದರು.
ಮಾನ್ಯತಾ ಟೆಕ್‌ಪಾರ್ಕ್ ಸಕಾಲದಲ್ಲಿ ಬಿಬಿಎಂಪಿ ತೆರಿಗೆಯನ್ನು ಪಾವತಿ ಮಾಡಿಕೊಂಡು ಬಂದಿದೆ.
ಪಾರ್ಕ್ ನ 9 ಬ್ಲಾಕ್‌ಗೆ ಸಂಬಂಧಿಸಿದಂತೆ ಟೊಟಲ್ ಸೆಷನ್ಸ್ ಸರ್ವೆ(ಟಿಎಸ್‌ಎಸ್) ಅನ್ನು ನಡೆಸಿದಾಗ ಕಳೆದ 2018ರಿಂದ ಸುಮಾರು 33 ಕೋಟಿ ರೂ. ತರಿಗೆ ಹಣವನ್ನು ಪಾವತಿಸದೆ ವಂಚನೆ ಮಾಡಿರುವುದು ತಿಳಿದು ಬಂದಿದೆ. ಹಾಗಾಗಿ ಬಿಬಿಎಂಪಿ ಕಾಯ್ದೆ ಪ್ರಕಾರ 67 ಕೋಟಿ ರೂ.ಗಳನ್ನು ಹೆಚ್ಚುವರಿ ದಂಡವನ್ನು ವಿಧಿಸಲಾಗಿದ್ದು, ದಂಡ ಸೇರಿದಂತೆ ಒಟ್ಟು 100 ಕೋಟಿ ರೂ.ಗಳನ್ನು ಮಾನ್ಯತಾ ಟೆಕ್‌ಪಾರ್ಕ್ ಪಾಲಿಕೆಗೆ ಪಾವತಿ ಮಾಡಬೇಕಾಗಿರುತ್ತದೆ. ಅದರಲ್ಲಿ 28 ಕೋಟಿ ರೂ.ಗಳನ್ನು ಪಾವತಿ ಮಾಡಿದ್ದು, 72 ಕೋಟಿ ರೂ. ಹಣವನ್ನು ಪಾಲಿಕೆಗೆ ಪಾವತಿ ಮಾಡಬೇಕಾಗಿರುತ್ತದೆ.
72 ಕೋಟಿ ರೂ.ಗಳನ್ನು ಪಾವತಿ ಮಾಡುವಂತೆ ಪಾಲಿಕೆಯು ಹಲಾವಾರು ಬಾರಿ ನೋಟಿಸ್ ನೀಡುತ್ತಾ ಬಂದಿದ್ದರೂ, ಮಾನ್ಯತಾ ಟೆಕ್‌ಪಾರ್ಕ್ ತೆರಿಗೆಯ ಹಣವನ್ನು ಪಾವತಿ ಮಾಡಿಲ್ಲ. ಹಾಗಾಗಿ ಮಾನ್ಯತಾ ಟೆಕ್‌ಪಾರ್ಕ್ಗೆ ಬೀಗ ಹಾಕಬೇಕಾಯಿತು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.