Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದೇಶದಲ್ಲಿರುವ ಚೋರ್ ಬಜಾರ್‌ಗಳ ಬಗ್ಗೆ ನಿಮಗೆ ಗೊತ್ತೇ...!

ದೇಶದಲ್ಲಿರುವ ಚೋರ್ ಬಜಾರ್‌ಗಳ ಬಗ್ಗೆ ನಿಮಗೆ ಗೊತ್ತೇ...!

ಗುರುಮೂರ್ತಿ

ಬೆಂಗಳೂರು , ಶುಕ್ರವಾರ, 2 ಫೆಬ್ರವರಿ 2018 (17:37 IST)
ದೇಶದಲ್ಲಿ ನಾನಾ ತರಹದ ಮಾರುಕಟ್ಟೆಗಳಿವೆ. ಅವೆಲ್ಲದರಿಗಿಂತ ಭಿನ್ನವಾಗಿ ನಮಗೆ ಕಾಣಸಿಗುವುದು ಈ ಚೋರ್ ಬಜಾರ್‌ಗಳು. ಇಲ್ಲಿ ಎಲ್ಲಾ ತರಹದ ವಸ್ತುಗಳು ಲಭ್ಯವಿರುತ್ತವೆ. ಕಡಿಮೆ ಬೆಲೆ ಕೊಟ್ಟು ಬ್ರಾಂಡೆಡ್ ವಸ್ತುಗಳನ್ನು ನಾವು ಇಲ್ಲಿ ಖರೀದಿಸಬಹುದು ಆದರೆ ಆ ವಸ್ತುಗಳು ಹೇಗೆ ಬಾಳಿಕೆ ಬರುತ್ತದೆ ಎಂಬುದು ಬಳಸಿದ ಮೇಲೆಯೇ ತಿಳಿಯಬೇಕು. ಕೆಲವೊಮ್ಮೆ ಇಲ್ಲಿ ಖರೀದಿಸಿದ ವಸ್ತುಗಳು ಚೆನ್ನಾಗಿ ಬಾಳಿಕೆ ಬರುತ್ತವೆ. ಕೆಲವೊಮ್ಮೆ ನಾವು ನಕಲಿ ವಸ್ತುಗಳನ್ನು ಖರೀದಿಸಿ ಮೋಸ ಹೋಗುವುದು ಉಂಟು.
ಈ ಚೋರ್ ಬಜಾರ್‌ಗಳಲ್ಲಿ ಮುಖ್ಯವಾಗಿ ಕದ್ದಿರುವ ವಸ್ತುಗಳನ್ನು ಮಾರುವುದು, ಹಳೆಯ ವಸ್ತುಗಳನ್ನು ಮಾರ್ಪಡಿಸಿ ಮಾರಾಟ ಮಾಡುವುದು ಹೀಗೆ ಹತ್ತು ಹಲವು. ಇಲ್ಲಿ ನಿಮಗೆ ಸಿಗದಿರುವ ವಸ್ತುಗಳೇ ಇಲ್ಲ. ಹಳೇ ಕಾಲದ ಗ್ರಾಮಾಫೋನ್‌ನಿಂದ ಹಿಡಿದು ಈಗಿನ ಐಫೋನ್‌ವರೆಗೂ ಎಲ್ಲವೂ ಇಲ್ಲಿ ಲಭ್ಯ. ಅಷ್ಟೇ ಅಲ್ಲ ದೊಡ್ಡ ದೊಡ್ಡ ಯಂತ್ರದ ಪರಿಕರಗಳು, ಹಳೆಕಾಲದ ಕಾರುಗಳು, ಬೈಕುಗಳು, ಲಾರಿಗೆ ಬಳಸುವ ಪ್ರತಿಯೊಂದು ವಸ್ತುಗಳು ಇಲ್ಲಿ ಲಭ್ಯವಿರುತ್ತದೆ.
 
ಮುಖ್ಯವಾಗಿ ಕಂಡುಬರುವ ಚೋರ್ ಬಜಾರ್‌ಗಳು...
 
ಮುಂಬೈ ಚೋರ್ ಬಜಾರ್
webdunia
ದಕ್ಷಿಣ ಮುಂಬೈ ನಗರದ ಮಟನ್‌ಸ್ಟ್ರೀಟ್‌ನಲ್ಲಿರುವ ಮಹಮದ್‌ ಅಲಿ ರಸ್ತೆಯಲ್ಲಿ ಕಂಡುಬರುವ ಸುಪ್ರಸಿದ್ಧ ಚೋರ್ ಬಜಾರ್ ಇದಾಗಿದ್ದು, ಮೊದಲು ಇದನ್ನು ಶೋರ್ ಬಜಾರ್ ಎಂದು ಕರೆಯಲಾಗುತ್ತಿತ್ತು. ನಂತರ ಕ್ರಮೇಣ ಅದು ಚೋರ್ ಬಜಾರ್ ಆಯಿತು ಎನ್ನುತ್ತಾರೆ. ಈ ಮಾರುಕಟ್ಟೆ ಸುಮಾರು 150 ವರ್ಷಗಳಷ್ಟು ಹಿಂದಿನಿಂದಲೂ ಚಾಲ್ತಿಯಲ್ಲಿದೆ ಎನ್ನಲಾಗುತ್ತಿದೆ. ಈ ಪ್ರದೇಶವು ಪ್ರತಿದಿನವೂ ಜನಜಂಗುಳಿಯಿಂದ ತುಂಬಿದ್ದು, ಇಲ್ಲಿ ಎಲ್ಲಾ ರೀತಿಯ ಕದ್ದ ವಸ್ತುಗಳು ಕಂಡುಬರುತ್ತವೆ. ಅದಲ್ಲದೇ ನೀವು ಇಲ್ಲಿ ಹಳೆ ಕಾಲದ ನಾಣ್ಯದಿಂದ ಹಿಡಿದು ಈಗಿನ ಕಾಲದ ವಸ್ತುಗಳು ನಿಮಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತವೆ.
 
ದೆಹಲಿ ಚೋರ್ ಬಜಾರ್
webdunia

ಹಳೆ ದೆಹಲಿಯ ಚಾಂದಿನ ಚೌಕ್ ಇದೀಗ ದೆಹಲಿಯ ಸುಪ್ರಸಿದ್ಧ ಚೋರ್ ಬಜಾರ್ ಆಗಿದೆ. ಈ ಮೊದಲು ಇದು ಕೆಂಪು ಕೋಟೆಯ ಹಿಂದೆ ಸಂಡೇ ಮಾರುಕಟ್ಟೆಯ ರೀತಿಯಲ್ಲಿ ಇತ್ತಾದರೂ ಇಂದು ದರಿಯಾಗಂಜ್‍ನಲ್ಲಿನ ನಾವೆಲ್ಟಿ ಹಾಗೂ ಜಾಮಾ ಮಸೀದಿಯಲ್ಲಿ ಚೋರ್ ಬಜಾರ್ ಆಗಿ ಮಾರ್ಪಾಡಾಗಿದೆ. ಇದನ್ನು "ಕಾಬಾಡಿ ಬಜಾರ್‌" ಎಂದು ಕರೆಯಲಾಗುತ್ತದೆ. ಇಲ್ಲಿ ನಿಮಗೆ ಮಾರ್ಪಡಿಸಲಾದ ವಾಹನಗಳು, ಮೊಬೈಲ್ ಫೋನ್, ಬ್ರಾಂಡೆಡ್ ಬೂಟುಗಳು, ಯಂತ್ರೋಪಕರಣಗಳು ಸೇರಿದಂತೆ ನೀವು ಬಯಸಿದ ಎಲ್ಲವೂ ಇಲ್ಲಿ ಸಿಗುತ್ತವೆ.
 
 
ಬೆಂಗಳೂರು ಚೋರ್ ಬಜಾರ್
webdunia
ಗಾರ್ಡನ್ ಸಿಟಿ ಬೆಂಗಳೂರಿನಲ್ಲೂ ಸಹ ಈ ಚೋರ್ ಮಾರುಕಟ್ಟೆ ಇದ್ದು, ಇದು ಮುಂಬೈ ಮತ್ತು ದೆಹಲಿಯಷ್ಟು ಖ್ಯಾತಿಯನ್ನು ಹೊಂದಿಲ್ಲ. ಇಲ್ಲಿರುವ ಚಿಕ್ಕಪೇಟೆ ವ್ಯಾಪ್ತಿಯಲ್ಲಿ ಈ ಮಾರುಕಟ್ಟೆ ಇದ್ದು, ಇಲ್ಲಿ ಲ್ಯಾಪ್‌ಟಾಪ್, ಮೊಬೈಲ್‌, ಬಟ್ಟೆಗಳು ಸೇರಿದಂತೆ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಾವು ಇಲ್ಲಿ ಕಾಣಬಹುದಾಗಿದೆ. ಪ್ರತಿ ರವಿವಾರದಂದು ನೆಡೆಯುವ ಈ ಮಾರುಕಟ್ಟೆಯಲ್ಲಿ ನಿಮಗೆ ಬೇಕಾದ ಎಲ್ಲಾ ರೀತಿಯ ವಸ್ತುಗಳು, ಕದ್ದ ಬೈಕ್‌ ಬಿಡಿ ಭಾಗಗಳು ಲಭ್ಯವಿರುತ್ತವೆ. ಇಲ್ಲಿ ಬ್ರಾಂಡೆಡ್ ವಸ್ತುಗಳು ಕಡಿಮೆ ಬೆಲೆಗೆ ಲಭ್ಯವಿದ್ದು, ಜನರು ಆ ದಿನಗಳಲ್ಲಿ ಈ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ.
 
ಚೆನ್ನೈ ಚೋರ್ ಬಜಾರ್
webdunia
ಚೆನ್ನೈ‌ ಸೆಂಟ್ರಲ್ ರೈಲ್ವೇ ನಿಲ್ದಾಣದ ಹಿಂಬದಿಯಲ್ಲಿ ಕಂಡುಬರುವ ಈ ಚೋರ್ ಮಾರುಕಟ್ಟೆಯಲ್ಲಿ ಮೊಬೈಲ್ ಫೋನ್‌ಗಳು ಹಳೆ ಕಾಲದ ನಾಣ್ಯಗಳು, ಹಳೆ ಕಾಲದ ಕ್ಯಾಮರಾಗಳು ಇಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇದನ್ನು ಮೋರ್‌ ಮಾರ್ಕೆಟ್‌ ಅಂತಲೂ ಕರೆಯುತ್ತಾರೆ. ಇಲ್ಲಿ ಎಲ್ಲಾ ಶೈಕ್ಷಣಿಕ ಕೋರ್ಸುಗಳ ಪುಸ್ತಕಗಳನ್ನು ನಾವು ಇಲ್ಲಿ ಕಾಣಬಹುದು. ಅಲ್ಲದೇ ಚೆನ್ನೈ ಚೋರ್‌ ಬಜಾರಿನಲ್ಲಿ ವಾಹನದ ಮೂಲ ಬಿಡಿಭಾಗಗಳನ್ನು ಬದಲಾಯಿಸಿ ಮಾರ್ಪಡಿಸುವುದಕ್ಕೆ ಇದು ಖ್ಯಾತಿ ಹೊಂದಿದೆ ಎಂದು ಹೇಳುತ್ತಾರೆ. ಅಲ್ಲದೇ ಚೆನ್ನೈ‌ನಲ್ಲಿ ಇನ್ನೊಂದು ಮಾರುಕಟ್ಟೆ ಇದ್ದು ಅದನ್ನು ಚೋರ್ ಮಾರುಕಟ್ಟೆ ಎಂದೇ ಸ್ಥಳೀಯರು ಕರಿಯುವುದು ವಾಡಿಕೆ ಅದೇ ಬರ್ಮಾ ಬಜಾರ್. ಇಲ್ಲಿ ನೀವು ಯಾವ ರೀತಿಯ ಎಲೆಕ್ಟ್ರಾನಿಕ್ಸ್ ವಸ್ತುಗಳು, ಸಂಗೀತ ಪರಿಕರಗಳು, ಕ್ಯಾಮರಾ ಸೇರಿದಂತೆ ಉನ್ನತ ದರ್ಜೆಯ ಮೊಬೈಲ್ ಫೋನುಗಳನ್ನು ಸಹ ನೀವು ಕಡಿಮೆ ಬೆಲೆಗೆ ಖರೀದಿಸಬಹುದು.
 
ಈ ಮಾರುಕಟ್ಟೆಗಳಲ್ಲಿ ನೀವು ಯಾವುದಾದರೂ ವಸ್ತುಗಳನ್ನು ಖರೀದಿಸಬೇಕು ಎಂದುಕೊಂಡರೆ ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸಿ ಖರೀದಿಸುವುದು ಉತ್ತಮ. ಅಲ್ಲದೇ ಇಲ್ಲಿ ಖರೀದಿಸುವ ಯಾವುದೇ ವಸ್ತುಗಳಿಗೆ ರಸಿದೀಯನ್ನು ನೀಡಲಾಗುವುದಿಲ್ಲ, ಅಲ್ಲದೇ ನೀವು ಒಮ್ಮೆ ಖರೀದಿಸಿದ ವಸ್ತುಗಳನ್ನು ಮರಳಿ ಪಡೆಯುವುದು ಇಲ್ಲ.
 
ಈ ಮೇಲಿನ ಮಾರುಕಟ್ಟೆಗಳಿಗೆ ನೀವು ಹೋಗಬೇಕು ಎಂದುಕೊಂಡರೆ ಯಾವುದೇ ಬೈಕ್ ಅಥವಾ ಕಾರುಗಳನ್ನು ನೀವು ತೆಗೆದುಕೊಂಡು ಹೋಗದಿರಿ ಏಕೆಂದರೆ ಮೊದಲೇ ಚೋರ್ ಮಾರುಕಟ್ಟೆಯಾಗಿದ್ದು ನಿಮ್ಮ ವಾಹನಗಳು ಕಳುವಾಗಬಹುದು ಇಲ್ಲವೇ ವಾಹನಗಳ ಬಿಡಿಭಾಗಗಳನ್ನು ಹೊತ್ತೊಯ್ಯಬಹುದು. ಹಾಗಾಗಿ ಇಂತಹ ಮಾರುಕಟ್ಟೆಯಲ್ಲಿ ಪ್ರಯಾಣಿಸುವಾಗ ಸಾಕಷ್ಟು ಎಚ್ಚರವಹಿಸುವುದು ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನೀವು ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಿಯರೇ, ನಿಮಗೊಂದು ಶುಭಸುದ್ದಿ,