Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿಮ್ಮ ಮನೆ ಗಡಿಯಾರ ಯಾವ ದಿಕ್ಕಿನಲ್ಲಿ ತೂಗು ಹಾಕಿದ್ದಿರಿ…?

ನಿಮ್ಮ ಮನೆ ಗಡಿಯಾರ ಯಾವ ದಿಕ್ಕಿನಲ್ಲಿ ತೂಗು ಹಾಕಿದ್ದಿರಿ…?
ಬೆಂಗಳೂರು , ಭಾನುವಾರ, 28 ಜನವರಿ 2018 (06:12 IST)
ಬೆಂಗಳೂರು: ಪ್ರತಿಯೊಬ್ಬರ ಮನೆಯಲ್ಲೂ ಗೋಡೆ ಗಡಿಯಾರ ಇದ್ದೇ ಇರುತ್ತದೆ. ಈಗ ನಾನಾತರಹದ ಗೋಡೆ ಗಡಿಯಾರಗಳು ಮಾರುಕಟ್ಟೆಯಲ್ಲಿವೆ.


ಎಲ್ಲರೂ ಗೋಡೆ ಗಡಿಯಾರವನ್ನು ತಮಗೆಬೇಕಾಗುವ ಸ್ಥಳದಲ್ಲಿ ಮನೆಯಲ್ಲಿ ತೂಗು ಹಾಕುತ್ತಾರೆ. ಆದರೆ ಗಡಿಯಾರವನ್ನು ತೂಗು ಹಾಕುವುದಕ್ಕೂ ಮೊದಲು ಕೆಲವೊಂದು ವಾಸ್ತುವಿನ ಸಲಹೆಗಳನ್ನು ಗಮನದಲ್ಲಿರಿಸಿಕೊಳ್ಳುವುದು ಉತ್ತಮ. ಗಡಿಯಾರವನ್ನು ಯಾವಾಗಲೂ ದಕ್ಷಿಣ ಭಾಗದಲ್ಲಿ ತೂಗು ಹಾಕಬಾರದು. ಹಾಗೆಯೇ ಬಾಗಿಲ ಮೇಲೂ ತೂಗು ಹಾಕಬಾರದು. ಪೂರ್ವ ದಿಕ್ಕು ಮತ್ತು ಉತ್ತರ ದಿಕ್ಕು ಬಹಳ ಉತ್ತಮ. ಪಶ್ಚಿಮ ದಿಕ್ಕು ಮಧ್ಯಮ. ಧನಾತ್ಮಕಶಕ್ತಿ ಸಿಗುತ್ತದೆ.


ವಾಸ್ತುಶಾಸ್ತ್ರದ ಪ್ರಕಾರ ಗಡಿಯಾರವನ್ನು ಮಂಚದ ಸಮೀಪದಲ್ಲೇ ತೂಗು ಹಾಕಬಾರದು ಏಕೆಂದರೆ ವಿಶ್ರಾಂತಿಯನ್ನು ಹೆಚ್ಚು ಬಯಸುತ್ತೇವೆ. ಯಾವುದೇ ಕಾರಣಕ್ಕೂ ಚಲನೆಯಲ್ಲಿ ಇಲ್ಲದ ಗಡಿಯಾರವನ್ನು ತೂಗು ಹಾಕಬಾರದು. ಇದರಿಂದ ಆಗಬೇಕಾದ ಕೆಲಸಗಳೆಲ್ಲ ನಿಧಾನವಾಗಿ ಸಾಗುತ್ತದೆ. ಐದು ನಿಮಿಷ ಮುಂದೆ ಇಟ್ಟಿದ್ದರೂ ಉತ್ತಮ. ಆಗ ಜೀವನದಲ್ಲೂ ಮುಂದೆ ಮುಂದೆ ಹೋಗುವ ಯೋಗ ಬರುವುದು. ಗಡಿಯಾರದ ಗಾಜು ಒಡೆದಿರಬಾರದು. ಒಡೆದಿದ್ದರೆ ಮನಸ್ಸು ಸಹ ಒಡೆಯುತ್ತದೆ. ಕಾಲ ಕಾಲಕ್ಕೆ ಸರಿಯಾಗಿ ಸ್ವಚ್ಛಗೊಳಿಸಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿನ ಅಮಂಗಳ ದೂರವಾಗಬೇಕೆ...? ಶುಕ್ರವಾರದಂದು ಈ ದೀಪ ಹಚ್ಚಿ!