Webdunia - Bharat's app for daily news and videos

Install App

ಅಘೋರಿಗಳು ಹೇಗಿರ್ತಾರೆ ಗೊತ್ತಾ...!

Webdunia
ಬುಧವಾರ, 22 ಆಗಸ್ಟ್ 2018 (19:32 IST)
ಗುರುಮೂರ್ತಿ
 
ಹಿಂದು ಪರಂಪರೆಯಲ್ಲಿ ಸಾಧು ಸಂತರು ಶರಣರು ಹೀಗೆ ಹಲವರು ತಮ್ಮ ತಮ್ಮ ಕೊಡುಗೆಯನ್ನು ನೀಡಿರುವುದನ್ನು ನೋಡಿದ್ದೇವೆ, ಅವರಿಗಿಂತಲೂ ಭಿನ್ನವಾಗಿ ಸಮಾಜದೊಂದಿಗೆ ಇರುವ ಕೆಲವು ಸಾಧುಗಳ ಗುಂಪಿದೆ ಅವರು ಇತರರಂತೆ ಬದುಕುವುದಿಲ್ಲ ಅವರ ಆಚಾರ ವಿಚಾರ ಎಲ್ಲವೂ ಸಾಮಾನ್ಯರಿಗಿಂತ ಭಿನ್ನ, ಅದರಲ್ಲೂ ಇವರು ನೋಡಲು ತುಂಬಾ ಭಯಂಕರವಾಗಿರುತ್ತಾರೆ ಮತ್ತು ಅವರ ಉಡುಗೆ ತೊಡುಗೆಗಳು ವಿಚಿತ್ರವಾಗಿರುತ್ತದೆ ಆದರೂ ಇವರನ್ನು ನೋಡಿದರೆ ಎಲ್ಲರಿಗೂ ಭಕ್ತಿ ಹಾಗೂ ಹೆದರಿಕೆ ಅವರು ಯಾರು ಅಂತಿರಾ ಅವರೇ ಅಘೋರಿಗಳು.
ಅಘೋರಿಗಳ ಕುರಿತು ಹೇಳುವುದಾದರೆ ಅವರು ಶಿವನ ಅಪ್ರತಿಮ ಭಕ್ತರು ಅವರಿಗೆ ಶಿವನೇ ಎಲ್ಲಾ ಅವರು ಹೆಚ್ಚಾಗಿ ಶಿವ ಮತ್ತು ಶಕ್ತಿಯನ್ನು ಆರಾಧನೆ ಮಾಡುತ್ತಾರೆ. ಅವರಲ್ಲಿ ಹಲವಾರು ಪಂಗಡಗಳಿವೆ ಅಷ್ಟಕ್ಕೂ ಇವರು ಸಾಮಾನ್ಯ ಜನರ ನಡುವೆ ಕಾಣಿಸಿಕೊಳ್ಳುವುದಿಲ್ಲ ಇವರು ಏಕಾಂಗಿಯಾಗಿ ಏಕಾಂತವಾಗಿರಲು ಭಯಸುತ್ತಾರೆ ಇವರು ಹೆಚ್ಚಾಗಿ ಶಿವನ ದೇವಾಲಯಗಳ ಬಳಿಯಲ್ಲಿ ಕಾಣಸಿಗುತ್ತಾರೆ. ಕಾಶಿಯಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಇವರಿಗೆ ಸ್ಮಶಾನವೇ ದೇವಾಲಯ ಇವರು ದೇಹಕ್ಕೆ ಯಾವುದೇ ಮಾನ್ಯತೆ ಕೊಡುವುದಿಲ್ಲ ಇವರ ಪ್ರಕಾರ ದೇಹ ಅನ್ನುವುದು ಅಸ್ತಿತ್ವದ ಒಂದು ಭಾಗ ಆತ್ಮವೇ ಸರ್ವಶ್ರೇಷ್ಟ ಹಾಗಾಗೀ ಆತ್ಮವನ್ನು ಅರಿತವನೇ ಪರಮಾತ್ಮನನ್ನು ಸೇರತ್ತಾನೆ ಎಂಬ ನಂಬಿಕೆ ಇವರಲ್ಲಿದೆ. ಇವರು ಎಲ್ಲಾ ಭಾವ ಬಂಧಗಳಿಂದ ಮುಕ್ತವಾಗಿರುತ್ತಾರೆ. ಇವರಲ್ಲೂ ಗುರುಪದ್ಧತಿ ಇದೆ, ಗುರು ಆದವನು ತನ್ನ ಶಿಷ್ಯನನ್ನಾಗಿ ಮಾಡಿಕೊಳ್ಳುವ ಮೊದಲು ಹಲವು ಪರೀಕ್ಷೆಗಳನ್ನು ಮಾಡಿಸುತ್ತಾನೆ. ಅದಾದ ಮೇಲೆಯೇ ಆತನನ್ನು ಗುರು ಸ್ವೀಕರಿಸುತ್ತಾನೆ ಹೀಗೆ ಗುರುವಿನ ಮೂಲಕ ದೀಕ್ಷೆ ಪಡೆದು ಅಘೋರಿ ಆಗುವುದು ಪರಂಪರೆ.
ಈ ಅಘೋರಿಗಳು ಯಂತ್ರ ಮಂತ್ರ ತಂತ್ರಗಳನ್ನು ತಮ್ಮ ವಶಮಾಡಿಕೊಂಡಿರುತ್ತಾರೆ ಎಂದು ಹೇಳಲಾಗುತ್ತದೆ ಇವರು ಯಾವುದೇ ಜಾಗದಲ್ಲಿ ನಿರ್ಭಯವಾಗಿ ವಾಸಿಸಬಲ್ಲರೂ ಹಾಗೂ ಸುತ್ತಾಡಬಲ್ಲರು, ಕೆಲವರೂ ಊಟವಿಲ್ಲದೇ ತಿಂಗಳುಗಟ್ಟಲೆ ಜೀವಿಸುತ್ತಾರೆ ಇದೆಲ್ಲಾ ಅವರಿಗೆ ಮಂತ್ರಶಕ್ತಿಯಿಂದ ಲಭ್ಯವಾಗಿರುತ್ತದೆ ಎಂಬ ಮಾತಿದೆ ಮತ್ತು ಇವರು ಯೋಗವನ್ನು ಕರಗತವನ್ನಾಗಿಸಿಕೊಂಡಿರುತ್ತಾರೆ ಇವರು ಹಠಯೋಗದಲ್ಲಿ ಪರಿಣಿತರಾಗಿರುತ್ತಾರೆ ಇವರು 100 ಕ್ಕೂ ಹೆಚ್ಚು ವರ್ಷಗಳ ಕಾಲ ಬದುಕಿರುವುದನ್ನು ಮತ್ತು ಬದುಕುತ್ತಿರುವುದನ್ನು ನಾವು ಇತಿಹಾಸದ ಪುಟಗಳಲ್ಲಿ ಹಾಗೂ ಶ್ರೀಶೈಲ, ಪಶುಪತಿನಾಥ, ಕೇದಾರನಾಥ ಮುಂತಾದ ಸ್ಥಳಗಳಲ್ಲಿ ಕಾಣಬಹುದು. ಅಷ್ಟೇ ಅಲ್ಲ ಇವರು ಹೆಚ್ಚಾಗಿ ಕಾಮಾಕ್ಯದಲ್ಲೂ ಕಂಡುಬರುತ್ತಾರೆ. ಇವರು ಶಿವ ಮತ್ತು ಶಕ್ತಿ ರೂಪವಾದ ದುರ್ಗಾ, ಕಾಳಿ, ಕಮಖ್ಯ, ತಾರಾ, ಪಾರ್ವತಿ, ಗೌರಿ ದೇವತೆ ಹೆಚ್ಚಾಗಿ ಪೂಜಿಸುತ್ತಾರೆ ಹಿಂಗ್ಲಾಜ್ ಮಾತಾ ಅಘೋರಿಗಳ ಕುಲ ದೇವತೆಯಾಗಿ ಪೂಜಿಸಲ್ಪಡುತ್ತಾಳೆ.
 
ಹೆಚ್ಚಾಗಿ ಅಘೋರಿಗಳು ಯಾರನ್ನು ದ್ವೇಷಿಸುವುದಿಲ್ಲ ಇವರು ಎಲ್ಲರನ್ನೂ ಸಮಾನವಾಗಿ ಕಾಣುವಂತ ಮನಸ್ಥಿತಿಯನ್ನು ಹೊಂದಿದವರಾಗಿರುತ್ತಾರೆ ಆದರೆ ಒಮ್ಮೆ ಏನಾದರೂ ಇವರನ್ನು ಸಿಟ್ಟಿಗೆಬ್ಬಿಸಿದಲ್ಲಿ ಅವರು ಹಿಂಸೆಯನ್ನು ಹಾನಿಯನ್ನು ಮಾಡಬಹುದು ಆದರೂ ಹೆಚ್ಚಾಗಿ ಇವರು ಯಾರನ್ನು ಹಿಂಸಿಸುವುದಿಲ್ಲ ಮತ್ತು ಅವರು ಶಿವನನ್ನು ಹೊರತಾಗಿ ಯಾರನ್ನು ಪ್ರೀತಿಸುವುದಿಲ್ಲ ಏಕೆಂದರೆ ಇದು ಅವರನ್ನು ಭಾವ ಭಂದದಲ್ಲಿ ಭಂದಿಸುತ್ತದೆ ಹಾಗಾಗೀ ಯಾರನ್ನು ತಮ್ಮ ಸನಿಹ ಬಿಟ್ಟುಕೊಳ್ಳುವುದಿಲ್ಲ. ಅವರು ಪಂಚೇಂದ್ರಿಯಗಳನ್ನು ಹಿಡಿತದಲ್ಲಿ ಇರಿಸಿಕೊಂಡವರಾಗಿರುತ್ತಾರೆ.
ಇವರ ಆಚಾರ ವಿಚಾರಗಳು ಎಲ್ಲರಿಗಿಂತಲೂ ವಿಭಿನ್ನವಾಗಿರುತ್ತದೆ ಇವರು ದೇವರನ್ನು ನೋಡುವ ರೀತಿಯೇ ಬೇರೆ ಯಾರಿಗೆ ಯಾವುದು ಸಾಧ್ಯವಿಲ್ಲವೋ ಅದನ್ನು ಅಘೋರಿ ಮಾಡುತ್ತಾನೆ. ಇವರು ಮಾಂಸ ಭಕ್ಷಣೆಯನ್ನು ಮಾಡುವುದರೊಂದಿಗೆ ಮಧ್ಯಪಾನ ಮತ್ತು ಧೂಮಪಾನ ಅವರಿಗೆ ಪ್ರಿಯವಾದುದು ಆಗಿದೆ. ಅಷ್ಟೇ ಅಲ್ಲ ಇವರು ನರಮಾಂಸ ಭಕ್ಷಣೆಯನ್ನು ಮಾಡುತ್ತಾರೆ ಅದಕ್ಕಾಗಿ ಅವರು ಮನುಷ್ಯರನ್ನು ಸಾಯಿಸುವುದಿಲ್ಲ ಇವರು ಮನುಷ್ಯ ಸತ್ತ ನಂತರ ಅವರನ್ನು ಸುಡುವ ಪದ್ಧತಿ ಇರುತ್ತದೆ ಉದಾಹರಣೆಗೆ ಹೇಳುವುದಾದರೆ ಕಾಶಿಯಲ್ಲಿ ಹರಿಚಂದ್ರ ಘಾಟ್ ಮತ್ತು ಮಣಿಕರ್ಣಿಕಾ ಘಾಟ್‌ನಲ್ಲಿ ಹೆಣವನ್ನು ಸುಡುವ ಪದ್ಧತಿಯಿದೆ ಅಲ್ಲಿ ರಾತ್ರಿಯಾಗುತ್ತಿದ್ದಂತೆ ಅಘೋರಿಗಳು ಬರತೊಡಗುತ್ತಾರೆ ಅಲ್ಲಿ ಬೆಂಕಿಯಲ್ಲಿ ಬೇಯುತ್ತಿರುವ ಮನುಷ್ಯನ ಮಾಂಸವನ್ನು ತೆಗೆದುಕೊಳ್ಳುತ್ತಾರೆ ಮತ್ತು ಸತ್ತ ಮನುಷ್ಯನ ಭೂತಿಯನ್ನು ತಮ್ಮ ಮೈತುಂಬ ಬಡಿದುಕೊಳ್ಳುತ್ತಾರೆ ಅವರು ಅದನ್ನು ಚಿತಾಭಸ್ಮ ಎಂದು ಕರೆಯುತ್ತಾರೆ.

ಪ್ರತಿಯೊಬ್ಬ ಅಘೋರಿಯು ಈ ಚಿತಾಭಸ್ಮವನ್ನು ಬಡೆದುಕೊಳ್ಳುತ್ತಾರೆ. ಅವರಲ್ಲಿ ಇನ್ನೊಂದು ವಿಶೇಷವಿದೆ ಅವರು ಯಾರಿಗೂ ತಮ್ಮ ಪಂಥಕ್ಕೆ ಬನ್ನಿ ಎಂದು ಆಹ್ವಾನಮಾಡುವುದಾಗಲಿ ಅಥವಾ ಪ್ರೋತ್ಸಾಹಿಸುವ ಕಾರ್ಯವನ್ನಾಗಲಿ ಮಾಡುವುದಿಲ್ಲ ಮತ್ತು ಯಾರಿಗೂ ಅಘೋರತ್ವದ ಪ್ರಭಾವ ಬಿರುವುದಿಲ್ಲ ಏಕೆಂದಕೆ ಅಗೋರತ್ವ ಎಂಬುದು ಒಂದು ಹಠ ಸಾಧನೆ ಅದನ್ನು ಇಷ್ಟದಿಂದ
ಮಾಡಬೇಕೆ ಹೊರತು ಕಷ್ಟದಿಂದಲ್ಲ ಎಂಬುವುದು ಅವರ ನಂಬಿಕೆ.
 
ಈ ಅಘೋರಿಗಳು ಯಾರೊಂದಿಗೂ ತಮ್ಮ ನಿಜವಾದ ಹೆಸರನ್ನು ಹೇಳುವುದಿಲ್ಲ ಯಾರೇ ಏನೆ ಕರೆದರು ಸರಿಯೇ ಅವರು ತಮ್ಮ ಹೆಸರನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಮತ್ತು ತಮ್ಮ ಪೂರ್ವಾಶ್ರಮದ ಕುರಿತಾಗಿಯು ಅಷ್ಟೇ ಯಾರೊಂದಿಗೂ ಮಾತನಾಡುವುದಿಲ್ಲ ಒಂದು ವೇಳೆ ನೀವು ಅವರನ್ನು ಕೇಳಿದರೂ ಅವರು ಹಾರಿಕೆಯ ಉತ್ತರವನ್ನು ನೀಡುತ್ತಾರೆ ಹೊರತು ಸರಿಯಾದ ಉತ್ತರವನ್ನಾಗಲಿ ನೀಡುವುದಿಲ್ಲ ಅಲ್ಲದೇ ಅವರು ಯಾರೊಂದಿಗೂ ಹಣವನ್ನಾಗಲಿ ಇತರ ವಸ್ತುಗಳನ್ನಾಗಲಿ ಅಪೇಕ್ಷಿಸುವುದಿಲ್ಲ ಹೆಚ್ಚೆಂದರೆ ಅವರು ಗಾಂಜಾವನ್ನು ಕೇಳಬಹುದಷ್ಟೇ, ಏಕೆಂದರೆ ಅವರು ಹೆಚ್ಚಾಗಿ ಇಷ್ಟಪಡುವ ವಸ್ತುಗಳಲ್ಲಿ ಗಾಂಜಾ ಕೂಡಾ ಒಂದು ಇದು ಅವರನ್ನು ಧ್ಯಾನಕ್ಕೆ ಪೂರಕವಾಗುವುದರೊಂದಿಗೆ ಅವರಿಗೆ ಮನಸ್ಸನ್ನು ಏಕರೀತಿಯಲ್ಲಿ ಕೇಂದ್ರಿಕರಿಸಲು ಸಹಾಯಕಾರಿಯಾಗಿರುತ್ತದೆ ಎನ್ನಲಾಗುತ್ತದೆ ಹಾಗಾಗೀ ಸಾಮಾನ್ಯವಾಗಿ ಎಲ್ಲಾ ಅಘೋರಿ ಬಾಬಾಗಳು ಹೆಚ್ಚು ಗಾಂಜಾವನ್ನು ಸೇವಿಸುತ್ತಾರೆ ಅದರ ಹೊರತಾಗಿ ಬೇರೆ  ಏನನ್ನು ಅವರು ಅಪೇಕ್ಷಿಸುವುದಿಲ್ಲ.

ಕೆಲವು ಅಘೋರಿಗಳು ಹಲವು ತಂತ್ರ ಮಂತ್ರಗಳನ್ನು ಸಿದ್ಧಿಸಿಕೊಂಡು ಸಿದ್ಧಿ ಪುರಷರಾಗಿರುತ್ತಾರೆ ಅಂತಹವರು ಹೆಚ್ಚಾಗಿ ಜನಜಂಗುಳಿಯಲ್ಲಿ ಕಾಣಸಿಗುವುದಿಲ್ಲ ಅವರು ಎಲ್ಲೋ ದೂರದಲ್ಲಿರುವ ಸ್ಮಶಾನದಲ್ಲೋ ಇಲ್ಲವೇ ಬೇರೆ ಎಲ್ಲಾದರೂ ಒಬ್ಬಂಟಿಯಾಗಿ ಇರುತ್ತಾರೆ. ಅವರು ಹೆಚ್ಚು ಮಾತನಾಡುವುದಿಲ್ಲ. ಅಂತಹ ಅಘೋರಿಗಳು ತುಂಬಾ ಶಕ್ತಿಶಾಲಿಯಾಗಿರುತ್ತಾರೆ. ಇವರಿಗೆ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಸಹ ಇವರು ಹೊಂದಿರುತ್ತಾರೆ ಇದು  ಇಂದಿಗೂ ವಿಜ್ಞಾನಕ್ಕೆ ಸವಾಲಾಗಿದೆ ಎಂದೇ ಹೇಳಬಹುದು. ಹೆಚ್ಚಾಗಿ ಇವರು ಬೂದಿಯನ್ನು ತಮ್ಮ ಉಡುಪನ್ನಾಗಿಸಿಕೊಂಡಿರುತ್ತಾರೆ ಅವರು ಬೆತ್ತಲೆಯಾಗಿರುವುದಕ್ಕೆ ಹೆಚ್ಚು ಇಷ್ಟಪಡುತ್ತಾರೆ ಏಕೆಂದರೆ ಮನುಷ್ಯ ಬೆತ್ತಲೆಯಾಗಿದ್ದಾಗಲೇ ಮನಸ್ಸು ಸ್ಥಿಮಿತವನ್ನು ಕಾಪಾಡಿಕೊಳ್ಳುವುದರೊಂದಿಗೆ ಪಂಚೇಂದ್ರಿಯ ನಿಗ್ರಹಿಸುವಿಕೆಗೆ ಇದು ಸಹಾಯಕಾರಿಯಾಗಿರುತ್ತದೆ ಎಂದು ಅವರು ಭಾವಿಸುತ್ತಾರೆ.
ಇವರು ಹೆಚ್ಚಾಗಿ ಒಂದು ಗೂಡುವುದು ಕಾಮಾಕ್ಯದಲ್ಲಿ ನಡೆಯುವ ಅಬುಬಚಿ ಮೇಳದಲ್ಲಿ ಹೌದು ಹೆಚ್ಚಾಗಿ ದೀಕ್ಷೆಯನ್ನು ಅಲ್ಲೇ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ ಅಷ್ಟೇ ಅಲ್ಲ ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳಗಳಲ್ಲಿ ನಾವು ಹೆಚ್ಚೆಚ್ಚು ಅಘೋರಿಗಳನ್ನು ಕಾಣಬಹುದು. ಇವರು ಯಾವುದೇ ಕಾರಣಕ್ಕೂ ತಮ್ಮ ಕೂದಲನ್ನು ಕತ್ತರಿಸುವುದಿಲ್ಲ ಮತ್ತು ಗಡ್ಡವನ್ನು ಕತ್ತರಿಸುವುದಿಲ್ಲ ಇವರು ಸ್ಮಶಾನದಲ್ಲಿ ಅರ್ಧ ಸುಟ್ಟ ಮುಳೆಗಳನ್ನು ಅಲಂಕಾರಿಕ ವಸ್ತುಗಳನ್ನಾಗಿ ಮಾಡಿಕೊಂಡು ತಮ್ಮ ಮೈಮೇಲೆ ಧರಿಸುತ್ತಾರೆ ಇವರು ಹೆಚ್ಚಾಗಿ ರುದ್ರಾಕ್ಷಿಯನ್ನು ಧರಿಸಿಕುತ್ತಾರೆ.
ಇವರಲ್ಲಿ ಶವಪೂಜೆ ಮಾಡುವುದು ಸಾಮಾನ್ಯವಾಗಿ ಕಾಣಬಹುದು ಸತ್ತಿರುವ ವ್ಯಕ್ತಿಯ ಸಮಾಧಿಯ ಮೇಲೆ ಕುಳಿತು ಹೂತಿರುವ ಹೆಣವನ್ನು ಎಬ್ಬಿಸುವ ಕಲೆ ಇವರಿಗೆ ತಿಳಿರುತ್ತದೆ ಮತ್ತು ಆ ಮೂಲಕ ಅವರು ತಮ್ಮ ತಂತ್ರ ಮಂತ್ರ ಸಾಧನೆಯನ್ನು ಪೂರ್ಣಗೊಳಿಸುತ್ತಾರೆ ಎಂದು ಹೇಳುತ್ತಾರೆ ಅಷ್ಟೇ ಅಲ್ಲ ಇವರು ಕಾಳಿ, ತಾರಾ, ಯೋಗಿನಿ, ಡಾಕಿನಿ, ಭೈರವ, ಭೈರವಿ ಮತ್ತು ಬೇತಾಳ, ಪಿಶಾಚ, ಬ್ರಹ್ಮ ರಾಕ್ಷಸರಂತಹ ಪ್ರೇತಗಳನ್ನು ಆವಾಹಿಸಿ ಪೂಜೆ ಮಾಡುತ್ತಾರೆ ಮತ್ತು ನಿಗೂಢ ಶಕ್ತಿಗಳನ್ನು ಪಡೆಯಲು ಸ್ಮಶಾನದಲ್ಲಿ ಅವುಗಳಿಗೆ ಬಲಿ ಕೊಡುತ್ತಾರೆ ಅಲ್ಲದೇ ಈ ದೇವತೆಗಳನ್ನು ಅವರು ಸ್ಮಶಾನ ಅಧಿಪತಿ ಎಂದು ಪರಿಗಣಿಸುತ್ತಾರೆ ಎಂದು ನಂಬಲಾಗಿದೆ.
ಇವರಲ್ಲಿ ಅಘೋರ, ಕಾಪಾಲಿಕ, ಕಾಲಾಮುಖ, ನಾಗಾಸಾಧು ಹೀಗೆ ಹಲವು ರೀತಿಯ ಪಂಥಗಳನ್ನು ನಾವು ಕಾಣಬಹುದು ಇವರೆಲ್ಲರೂ ಶಿವನ ಭಕ್ತರೇ ಆಗಿದ್ದರೂ ಕೆಲವೊಂದು ಭಿನ್ನತೆಗಳು ಇವರ ನಡುವೆ ಕಂಡುಬರುತ್ತವೆ ಒಟ್ಟಿನಲ್ಲಿ ಹಿಂದಿನಿಂದಲೂ ಈ ಅಘೋರ ಪಂಥವು ಒಂದು ವಿಸ್ಮಯಕಾರಿ ಪಂಥವಾಗಿಯೇ ಇದ್ದೂ ಹಲವು ನಿಗೂಢತೆಗಳನ್ನು ಇಂದಿಗೂ ತನ್ನಲ್ಲಿ ಬಚ್ಚಿಟ್ಟುಕೊಂಡಿದೆ ಎಂದೆ ತಪ್ಪಾಗಲಾರದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments