ಮಳೆ ಜೊತೆ ಸಂಭ್ರಮ ಬರಬೇಕು, ಆದರೆ, ಇಲ್ಲಿ ಜನರಿಗೆ ಆತಂಕ ಬರುತ್ತದೆ. ಈ ರೀತಿ ಅಯ್ಯೋ ಅನ್ನಲು ಕಾರಣ ಮಳೆ ಜೊತೆಗೆ ಬರುವ ಜಲಕಂಟ
ಶತಮಾನಗಳ ಹಿಂದೆ ಬಹಳ ಮುಂದಾಲೋಚನೆಯಿಂದ ವ್ಯವಸ್ಥಿತವಾಗಿ ಬೆಂಗಳೂರು ನಗರಕ್ಕೆ ಕೆಂಪೇಗೌಡರು ಅಡಿಪಾಯ ಹಾಕಿದ್ದರು. ಆದರೆ ಈಗ ಬೆಂಗಳೂರು ಯಾವ ಸ್ಥಿತಿಯಲ್ಲಿದೆ? ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಸಿಕೊಳ್ಳುವ ಮತ್ತು ಸರಕಾರಕ್ಕೆ ಒಳ್ಳೆಯ ಅದಾಯ ತಂದುಕೊಡುವ ಬೆಂಗಳೂರಿಗೆ ಯಾಕಿಂಥ ಪರಿಸ್ಥಿತಿ?
ಬೆಂಗಳೂರಿನಲ್ಲಿ ಸ್ವಲ್ಪ ಮಳೆ ಬಂದರೂ ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಿಹೋಗುತ್ತವೆ. ಬಹುತೇಕ ರಸ್ತೆಗಳು ಸಂಚಾರಕ್ಕೆ ಕಷ್ಟ ಎನಿಸುತ್ತವೆ. ಹಿಂದೆ ಹಲವು ಬಾರಿ ಜನರು ಮಳೆನೀರಿಗೆ ಬಲಿಯಾದ ಘಟನೆಗಳು ನಡೆದಿವೆ. ಈ ವರ್ಷ ಅದೃಷ್ಟಕ್ಕೆ ಅಂಥ ದುರ್ಘಟನೆ ಸಂಭವಿಸದೇ ಹೋದರೂ ಪ್ರಮುಖ ಪ್ರದೇಶಗಳು ನೀರಿನಿಂದ ಮುಳುಗಿಹೋಗಿದ್ದುಂಟು.
ಭಾರತೀಯ ಹವಾಮಾನ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಕಳೆದ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನಲ್ಲಿ 377 ಮಿಮೀ ಮಳೆಯಾಗಿದೆ. ಇದು ಬೆಂಗಳೂರಿನ ಇತಿಹಾಸದಲ್ಲೇ ಒಂದು ತಿಂಗಳಲ್ಲಿ ಸುರಿದ ಎರಡನೇ ಅತಿಹೆಚ್ಚು ಮಳೆಪ್ರಮಾಣವಾಗಿದೆ. 1998ರಲ್ಲಿ ಇಲ್ಲಿ 387.1 ಮಿಮೀ ಮಳೆಯಾಗಿದ್ದು ಈಗಲೂ ದಾಖಲೆಯಾಗಿದೆ. 2011 ಮತ್ತು 2017ರಲ್ಲಿ 250 ಮಿಮೀಗಿಂತಲೂ ಹೆಚ್ಚು ಮಳೆಯಾಗಿದ್ದು ಬಿಟ್ಟರೆ ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ಆಗಸ್ಟ್ ತಿಂಗಳಲ್ಲಿ ಮಳೆ ಪ್ರಮಾಣ 200 ಮಿಮೀ ದಾಟಿಲ್ಲ.