Publish Date: Mon, 20 Jun 2022 (10:00 IST)
Updated Date: Mon, 20 Jun 2022 (10:12 IST)
ಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್-ಹೇಝಲ್ ಕೀಚ್ ಅಪ್ಪಂದಿರ ದಿನದಂದು ತಮ್ಮ ಮಗನ ಮೊದಲ ಫೋಟೋವನ್ನು ರಿವೀಲ್ ಮಾಡಿದ್ದರು.
ಅದರ ಜೊತೆಗೆ ಯುವಿ ದಂಪತಿ ತಮ್ಮ ಮಗನ ಹೆಸರನ್ನೂ ಬಹಿರಂಗಪಡಿಸಿದ್ದಾರೆ. ಯುವಿ ಪುತ್ರನಿಗೆ ಓರಿಯನ್ ಕೀಚ್ ಸಿಂಗ್ ಎಂದು ನಾಮಕರಣ ಮಾಡಲಾಗಿದೆ.
ಓರಿಯನ್ ಎನ್ನುವುದು ಗ್ರೀಕ್ ಮೂಲದ ಶಬ್ಧವಾಗಿದ್ದು, ಇದರ ಅರ್ಥ ಅಗ್ನಿ ಪುತ್ರ ಎಂದಾಗಿದೆ. ಅಂತೂ ಕ್ರಿಕೆಟ್ ಲೋಕದಲ್ಲಿ ಹೆಸರು ಮಾಡಿರುವ ಯುವಿ ಈಗ ತಮ್ಮ ಮಗನಿಗೆ ವಿಶಿಷ್ಟ ಹೆಸರಿಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.