Publish Date: Fri, 24 Jul 2020 (11:59 IST)
Updated Date: Fri, 24 Jul 2020 (12:00 IST)
ಮುಂಬೈ: ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಎಂದರೆ ಸಹ ಕ್ರಿಕೆಟಿಗರಿಗೆ ಅಚ್ಚುಮೆಚ್ಚು. ಚಾಹಲ್ ಟಿವಿ ಎಂದು ಬಿಸಿಸಿಐ ಟಿವಿಗೆ ಸಹ ಆಟಗಾರರ ಸಂದರ್ಶನ ಮಾಡಿ ಕಾಲೆಳೆಯುವ ಚಾಹಲ್ ಸಾಮಾಜಿಕ ಜಾಲತಾಣದಲ್ಲೂ ಟ್ರೋಲ್ ಮಾಡುವುದರಲ್ಲಿ ಎತ್ತಿದ ಕೈ.
ನಿನ್ನೆ ಅವರ ಜನ್ಮದಿನವಿತ್ತು. ಈ ದಿನ ಅವರಿಗೆ ತಂಡದಲ್ಲಿ ಯಾವೆಲ್ಲಾ ಅಡ್ಡ ಹೆಸರು ಇದೆ ಎಂಬುದು ಬಹಿರಂಗವಾಗಿದೆ. ಒಬ್ಬೊಬ್ಬ ಆಟಗಾರರು ಅವರನ್ನು ಒಂದೊಂದು ಹೆಸರಿನಿಂದ ಕರೆದು ಟ್ರೋಲ್ ಮಾಡಿದ್ದಾರೆ.
ಯುವರಾಜ್ ಸಿಂಗ್ ಅಂತೂ ಚಾಹಲ್ ರನ್ನು ‘ಮಿಸ್ಟರ್ ಚುಹಾ’ ಅಂದರೆ ಇಲಿ ಎಂದು ಸಂಬೋಧಿಸಿ ವಿಶ್ ಮಾಡಿದ್ದಾರೆ. ಇನ್ನು ರೋಹಿತ್ ಶರ್ಮಾ ‘ಗ್ರೇಟೆಸ್ಟ್ ಇಂಡಿಯನ್ ಟ್ರೆಷರರ್’ ಎಂದು ಕಾಲೆಳೆದಿದ್ದಾರೆ. ಇನ್ನು, ಕ್ರಿಕೆಟ್ ದಿಗ್ಗಜ ಸಚಿನ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮುಂತಾದವರು ‘ಯುಜಿ’ ಎಂದು ಕರೆದು ಚಾಹಲ್ ರ ಫನ್ನಿ ಫೋಟೋಗಳನ್ನು ಪ್ರಕಟಿಸಿ ವಿಶ್ ಮಾಡಿದ್ದಾರೆ. ಅಂತೂ ತಂಡದ ಸಹ ಆಟಗಾರರಿಗೆ ಚಾಹಲ್ ಎಷ್ಟರಮಟ್ಟಿಗೆ ಪ್ರೀತಿ ಪಾತ್ರ ಎನ್ನುವುದು ಇದರಿಂದ ಗೊತ್ತಾಗಿದೆ.