ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಬಗ್ಗೆ ಎಷ್ಟು ಕಾಳಜಿವಹಿಸುತ್ತಾರೆ ಎಂದು ಎಲ್ಲರಿಗೂ ಗೊತ್ತು. ಆದರೆ ಅವರ ಈ ಫಿಟ್ನೆಸ್ ಹುಚ್ಚು ಅಮ್ಮನ ಚಿಂತೆಗೆ ಕಾರಣವಾಗಿತ್ತಂತೆ.
ಫಿಟ್ನೆಸ್ ಕಾಪಾಡಿಕೊಳ್ಳಲು ಹಿತ ಮಿತವಾದ ಆಹಾರ ಸೇವಿಸುವಾಗ ಕೊಹ್ಲಿ ತೆಳ್ಳಗಾಗಿದ್ದು ನೋಡಿ ಎಲ್ಲಾ ಅಮ್ಮಂದಿರಂತೆ ಕೊಹ್ಲಿ ಅಮ್ಮನಿಗೂ ಚಿಂತೆಯಾಗಿತ್ತಂತೆ. ನೀನು ತುಂಬಾ ತೆಳ್ಳಗಾಗುತ್ತಿದ್ದೀ. ಏನಾದರೂ ಖಾಯಿಲೆ ಇರಬಹುದೇ ಎಂದು ಅಮ್ಮನಿಗೆ ಚಿಂತೆಯಾಗಿತ್ತಂತೆ.
ಆದರೆ ಹಾಗೇನೂ ಅಲ್ಲ. ಕ್ರೀಡಾಳುಗಳಿಗೆ ಫಿಟ್ನೆಸ್ ಕಾಪಾಡಿಕೊಳ್ಳುವಾಗ ಇದೆಲ್ಲಾ ಸಾಮಾನ್ಯ. ನನಗೆ ಏನೂ ಆರೋಗ್ಯ ಸಮಸ್ಯೆಯಾಗಿಲ್ಲ ಎಂದು ಅಮ್ಮನನ್ನು ಕನ್ವಿನ್ಸ್ ಮಾಡುವಷ್ಟರಲ್ಲಿ ಸಾಕು ಸಾಕಾಗಿತ್ತು ಎಂದು ಕೊಹ್ಲಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.