ಟೀಂ ಇಂಡಿಯಾ ಕೋಚ್ ಹುದ್ದೆ ನಿರಾಕರಿಸಿದ್ದ ರಾಹುಲ್ ದ್ರಾವಿಡ್: ಕಾರಣವೇನು ಗೊತ್ತಾ?

Webdunia
ಸೋಮವಾರ, 6 ಜುಲೈ 2020 (11:40 IST)
ಮುಂಬೈ: ಎಲ್ಲಾ ಸರಿ ಹೋಗಿದ್ದರೆ ಅನಿಲ್ ಕುಂಬ್ಳೆ ಬಳಿಕ ಟೀಂ ಇಂಡಿಯಾಗೆ ರಾಹುಲ್ ದ್ರಾವಿಡ್ ಕೋಚ್ ಆಗಬೇಕಿತ್ತು. ಆದರೆ ಈ ಅವಕಾಶವನ್ನು ಅವರಾಗಿಯೇ ನಿರಾಕರಿಸಿದರು ಎಂದು ಬಿಸಿಸಿಐ ಮಾಜಿ ಸಿಇಒ ವಿನೋದ್ ರಾಯ್ ಹೇಳಿದ್ದಾರೆ.


2017 ರಲ್ಲಿ ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದ ಬಳಿಕ ರಾಹುಲ್ ಹೆಸರು ಚಾಲ್ತಿಯಲ್ಲಿತ್ತು. ಅವರಿಗೆ ಕೋಚ್ ಹುದ್ದೆ ನೀಡಲು ತಯಾರಿದ್ದೆವು. ಆದರೆ ದ್ರಾವಿಡ್ ನಿರಾಕರಿಸಿದರು ಎಂದು ವಿನೋದ್ ರಾಯ್ ಹೇಳಿದ್ದಾರೆ. ಇದಕ್ಕೆ ದ್ರಾವಿಡ್ ನೀಡಿದ್ದ ಕಾರಣವೇನು ಗೊತ್ತಾ?

‘ನನಗೆ ಮನೆಯಲ್ಲಿ ಇಬ್ಬರು ಬೆಳೆಯುತ್ತಿರುವ ಮಕ್ಕಳಿದ್ದಾರೆ. ಸದ್ಯಕ್ಕೆ ಟೀಂ ಇಂಡಿಯಾ ಜತೆಗೆ ಮನೆ, ಕುಟುಂಬ ಬಿಟ್ಟು ತುಂಬಾ ಸಮಯ ಪ್ರವಾಸ ಮಾಡುತ್ತಿರಲು ಕಷ್ಟವಾಗುತ್ತದೆ. ಇದರಿಂದ ನನಗೆ ಟೀಂ ಇಂಡಿಯಾ ಕಡೆಗೆ ಸಂಪೂರ್ಣ ಗಮನ ಕೊಡಲು ಸಾಧ‍್ಯವಾಗಲ್ಲ’ ಎಂದಿದ್ದರಂತೆ ದ್ರಾವಿಡ್. ಅಷ್ಟೇ ಅಲ್ಲ ಆಗ ದ್ರಾವಿಡ್ ಅಂಡರ್ 19 ಕೋಚ್ ಆಗಿದ್ದರು. ಹುಡುಗರನ್ನು ಭವಿಷ್ಯದ ತಂಡಕ್ಕೆ ತಯಾರು ಮಾಡಲು ಅವರದ್ದೇ ಯೋಜನೆ ಹಾಕಿಕೊಂಡಿದ್ದರಂತೆ. ಇದರಲ್ಲೇ ನನಗೆ ಖುಷಿಯಿದೆ ಎಂದು ದ್ರಾವಿಡ್ ಟೀಂ ಇಂಡಿಯಾ ಕೋಚ್‍ ಆಗುವ ಅವಕಾಶವನ್ನು ನಿರಾಕರಿಸಿದರು ಎಂದು ವಿನೋದ್ ರಾಯ್ ಬಹಿರಂಗಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸೋಫಿ ಶೈನ್‌ರನ್ನು ಮದುವೆಯಾದ ಬೆನ್ನಲ್ಲೇ ಮಾಜಿ ಪತ್ನಿಯಿಂದ ಶಿಖರ್ ಧವನ್ ಸಿಕ್ತು ಹಣ, ಯಾವಾ ಕಾರಣದಲ್ಲಿ

ಸೆಮಿಫೈನಲ್‌ಗೂ ಮುನ್ನಾ ಮುಂಬೈನ ಪವರ್‌ಫುಲ್‌ ದೇವರ ದರ್ಶನ ಪಡೆದ ಟೀಂ ಇಂಡಿಯಾ

ಸಂಜು ಸ್ಯಾಮ್ಸನ್ ಪಂದ್ಯ ಗೆಲ್ಲಿಸಿದ್ದಕ್ಕೆ ನೌಕರರಿಗೆ 500 ರೂ ಗಿಫ್ಟ್ ಕೊಟ್ಟ ಕೇರಳದ ಅಂಗಡಿ ಮಾಲಿಕ Video

ಐಪಿಎಲ್‌2026 ಆರಂಭಕ್ಕೆ ದಿನ ಎನಿಸುತ್ತಿರುವಾಗ ಅಭಿಮಾನಿಗಳಿಗೆ ಆರ್‌ಸಿಬಿಯಿಂದ ಗುಡ್‌ನ್ಯೂಸ್‌

ಪುತ್ರ ಅಕಾಯ್ ಕೈ ಹಿಡಿದು ಲಂಡನ್ ಬೀದಿಯಲ್ಲಿ ಸುತ್ತಾಡುತ್ತಿರುವ ವಿರಾಟ್ ಕೊಹ್ಲಿ Video

ಮುಂದಿನ ಸುದ್ದಿ
Show comments