ಕೊಲೊಂಬೋ: ಮಾಜಿ ಕ್ರೀಡಾ ಸಚಿವರ ಆರೋಪದ ಹಿನ್ನಲೆಯಲ್ಲಿ 2011 ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆಗೆ ಮುಂದಾಗಿದ್ದ ಲಂಕಾ ಈಗ ಅದನ್ನು ಅರ್ಧಕ್ಕೇ ಕೈಬಿಟ್ಟಿದೆ.
ಮಾಜಿ ಸಚಿವರ ಆರೋಪದ ಮೇರೆಗೆ ಮುಂಬೈನಲ್ಲಿ ನಡೆದಿದ್ದ ಭಾರತ-ಲಂಕಾ ನಡುವಿನ ಫೈನಲ್ ಪಂದ್ಯದ ವಿಚಾರಣೆಯನ್ನು ಲಂಕಾ ಸರ್ಕಾರ ಆಂತರಿಕ ತನಿಖಾ ಸಮಿತಿಗೆ ವಹಿಸಿತ್ತು.
ಈ ಹಿನ್ನಲೆಯಲ್ಲಿ ಆ ಪಂದ್ಯದ ನಾಯಕರಾಗಿದ್ದ ಕುಮಾರ ಸಂಗಕ್ಕಾರ ಸೇರಿದಂತೆ ಲಂಕಾ ತಂಡದ ಪ್ರಮುಖರನ್ನು ವಿಚಾರಣಗೊಳಪಡಿಸಲಾಗಿತ್ತು. ಆದರೆ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರ ಸಿಗದ ಹಿನ್ನಲೆಯಲ್ಲಿ ತನಿಖೆ ನಿಲ್ಲಿಸಲು ತನಿಖಾ ತಂಡ ತೀರ್ಮಾನಿಸಿದೆ. ಆವತ್ತು ತಂಡದಲ್ಲಿ ನಡೆಸಿದ ಆಟಗಾರರ ಬದಲಾವಣೆ, ನಿರ್ಧಾರಗಳಿಗೆ ನಾಯಕ ಸೇರಿದಂತೆ ಪ್ರಮುಖರು ಸೂಕ್ತ ಕಾರಣ ನೀಡಿದ್ದಾರೆ. ಹೀಗಾಗಿ ನಾವು ಅವರ ಉತ್ತರದಿಂದ ತೃಪ್ತರಾಗಿದ್ದು, ಈ ಕುರಿತು ಹೆಚ್ಚಿನ ತನಿಖೆಯ ಅಗತ್ಯವಿಲ್ಲ ಎಂದು ತನಿಖಾ ತಂಡ ನಿರ್ಧಾರಕ್ಕೆ ಬಂದಿದೆ.