ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಗೆ ಮುಂಬೈನ ಶಾಲೆಯೊಂದು ಶುಲ್ಕದ ವಿಚಾರದಲ್ಲಿ ಮೋಸ ಹೋಗಿದ್ದರು ಎಂದರೆ ನೀವು ನಂಬಲೇ ಬೇಕು.
ಚಿಕ್ಕವರಿದ್ದಾಗ ಮುಂಬೈನ ಪ್ರತಿಷ್ಠಿತ ಶಾಲೆಯೊಂದು ಉಚಿತವಾಗಿ ಶಿಕ್ಷಣ ಕೊಡುತ್ತೇವೆ. ಕ್ರಿಕೆಟ್ ಆಡಿಕೊಂಡಿದ್ದರೆ ಸಾಕು ಎಂದು ಭರವಸೆ ನೀಡಿ ಶಾಲೆಗೆ ಸೇರಿಸಿಕೊಂಡಿದ್ದರಂತೆ.
ಆದರೆ ಮುಂದೆ ನುಡಿದಂತೆ ನಡೆಯದ ಶಾಲೆ ಶುಲ್ಕ ಕಟ್ಟುವಂತೆ ಸೂಚಿಸಿತಂತೆ. ಆದರೆ ಶುಲ್ಕ ಕಟ್ಟಲು ಹಣವಿಲ್ಲದ ಪಾಂಡ್ಯ 9 ನೇ ತರಗತಿಗೇ ಶಾಲೆ ಬಿಟ್ಟರಂತೆ. ಆದರೆ ಪುಕ್ಸಟೆ ಪ್ರಚಾರ ಕೊಟ್ಟಂತಾಗುತ್ತದೆ ಎಂದು ಹಾರ್ದಿಕ್ ಶಾಲೆಯ ಹೆಸರು ಹೇಳಲ್ಲವಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ