ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇದೀಗ ಮುಟ್ಟಿದ್ದೆಲ್ಲವೂ ಚಿನ್ನ ಎನ್ನುವ ಕಾಲ. ಇದೀಗ ಕೊಹ್ಲಿ ಫುಟ್ ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿಯನ್ನೂ ಹಿಂದಿಕ್ಕಿದ್ದಾರೆ. ಯಾವ ವಿಚಾರದಲ್ಲಿ ಅಂತೀರಾ? ಈ ಸುದ್ದಿ ಓದಿ.
ವಿರಾಟ್ ಕೊಹ್ಲಿ ನೂತನವಾಗಿ ಬಿಡುಗಡೆಯಾದ ಫೋರ್ಬ್ಸ್ ವಿಶ್ವದ ಶ್ರೀಮಂತ ಕ್ರೀಡಾಳುಗಳ ಪಟ್ಟಿಯಲ್ಲಿ ಟಾಪ್ 10 ರೊಳಗೆ ಸ್ಥಾನ ಪಡೆದಿದ್ದು, ಫುಟ್ಬಾಲ್ ದಿಗ್ಗಜ ಮೆಸ್ಸಿಯನ್ನೂ ಹಿಂದಿಕ್ಕಿದ್ದಾರೆ.
ಆಟಗಾರರ ಸಂಭಾವನೆ, ರಾಯಭಾರಿ ಒಪ್ಪಂದಗಳಿಂದ ಹರಿದುಬರುವ ಹಣ ಸೇರಿದಂತೆ ಎಲ್ಲಾ ಆದಾಯಗಳನ್ನು ಪರಿಗಣಿಸಿ ಈ ಪಟ್ಟಿ ತಯಾರಿಸಲಾಗುತ್ತದೆ. ಈ ಪಟ್ಟಿಯಲ್ಲಿ ಕೊಹ್ಲಿಗೆ ಏಳನೇ ಸ್ಥಾನ ದೊರಕಿದೆ. ಕೊಹ್ಲಿ ವಾರ್ಷಿಕ 14.5 ಮಿಲಿಯನ್ ಡಾಲರ್ ಗಳಿಸುತ್ತಾರೆ.
ಮೊದಲ ಸ್ಥಾನ ವಾರ್ಷಿಕ 37. 2 ಮಿಲಿಯನ್ ಡಾಲರ್ ಗಳಿಸುವ ಟೆನಿಸ್ ದಂತಕತೆ ರೋಜರ್ ಫೆಡರರ್ ಗೆ. ಶ್ರೀಮಂತ ಕ್ರೀಡಾಳುಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಕ್ರೀಡಾಪಟು ಕೊಹ್ಲಿ ಎನ್ನುವುದು ವಿಶೇಷ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ