Publish Date: Mon, 01 Jun 2020 (09:15 IST)
Updated Date: Mon, 01 Jun 2020 (09:19 IST)
ಮುಂಬೈ: ಮೈದಾನದಲ್ಲಿ ಆಟಗಾರರು ಸಣ್ಣ ತಪ್ಪು ಮಾಡಿದರೂ ರೇಗುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಿಂದೊಮ್ಮೆ ತಾವು ನಾಯಕ ಧೋನಿ ಬಳಿ ಬೈಸಿಕೊಂಡಿದ್ದ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ.
ಧೋನಿ ಕೂಲ್ ಕ್ಯಾಪ್ಟನ್ ಎಂದೇ ಹೆಸರುವಾಸಿ. ಹಾಗಿದ್ದರೂ ಅಗತ್ಯ ಬಂದಾಗ ಆಟಗಾರರ ಕಿವಿ ಹಿಂಡಿದ್ದೂ ಇದೆ. ಇಂತಹದ್ದೇ ಒಂದು ಘಟನೆಯನ್ನು ಕೊಹ್ಲಿ ಸ್ಮರಿಸಿಕೊಂಡಿದ್ದಾರೆ.
2012 ರ ಏಷ್ಯಾ ಕಪ್ ಕೂಟದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಈ ಘಟನೆ ನಡೆದಿತ್ತಂತೆ. ಪಾಕಿಸ್ತಾನದ ಬ್ಯಾಟ್ಸ್ ಮನ್ ಹೊಡೆದಿದ್ದ ರನ್ ತಡೆಯಲು ವಿಫಲರಾದ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮಿಸ್ ಫೀಲ್ಡ್ ಮಾಡಿ ಮೂರು ರನ್ ಬಿಟ್ಟುಕೊಟ್ಟಿದ್ದರಂತೆ.
ಈ ಮಿಸ್ ಫೀಲ್ಡ್ ಧೋನಿಯನ್ನು ಸಿಟ್ಟಿಗೆಬ್ಬಿಸಿತ್ತು. ವಾಪಸ್ ಬಾಲ್ ಎಂಎಸ್ ಬಳಿ ಎಸೆಯುವಾಗ ಅವರು ಅದು ಹೇಗೆ ನೀವಿಬ್ಬರೂ ಮೂರು ರನ್ ಸುಲಭವಾಗಿ ಬಿಟ್ಟುಕೊಟ್ಟಿರಿ ಎಂದು ಕೆಂಗಣ್ಣು ಬೀರಿದ್ದರು ಎಂದು ಕೊಹ್ಲಿ ಇನ್ ಸ್ಟಾಗ್ರಾಂ ಲೈವ್ ಚ್ಯಾಟ್ ನಲ್ಲಿ ಹೇಳಿಕೊಂಡಿದ್ದಾರೆ.