Publish Date: Sun, 31 May 2020 (09:16 IST)
Updated Date: Sun, 31 May 2020 (09:17 IST)
ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ಎಂದೆ ಧೋನಿ ಎನ್ನುವಷ್ಟರ ಮಟ್ಟಿಗೆ ಅವರ ಹೆಸರು ಬ್ರ್ಯಾಂಡ್ ಆಗಿದೆ. ಚೆನ್ನೈ ತಂಡದ ನಾಯಕತ್ವ ವಹಿಸಿ ಧೋನಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಲ್ಲದೇ ಐಪಿಎಲ್ ನಲ್ಲೇ ಅತೀ ಯಶಸ್ವೀ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಆದರೆ ಧೋನಿ ಚೆನ್ನೈ ತಂಡದ ಪಾಲಾಗುವ ಮೊದಲು ಆರ್ ಸಿಬಿ ಅವರನ್ನು ಖರೀದಿಸುವ ಬಗ್ಗೆ ಒಮ್ಮೆ ಯೋಚನೆ ಮಾಡಿತ್ತಂತೆ. 2008 ರ ಮೊದಲ ಐಪಿಎಲ್ ಹರಾಜು ಪ್ರಕ್ರಿಯೆ ಸಂದರ್ಭ ಆರ್ ಸಿಬಿ ಭಾಗವಾಗಿದ್ದ ಚಾರು ಶರ್ಮಾ ಅಂದು ಧೋನಿ ಚೆನ್ನೈ ಪಾಲಾಗಿದ್ದು ಹೇಗೆ ಎಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
‘ಧೋನಿಯನ್ನು 1.5 ಮಿಲಿಯನ್ ಗೆ ಚೆನ್ನೈ ಖರೀದಿ ಮಾಡಿತ್ತು. ಒಂದು ವೇಳೆ ಧೋನಿ ಅಷ್ಟು ದುಬಾರಿ ಮೊತ್ತಕ್ಕೆ ಹರಾಜಾಗಿ ವಿಫಲರಾಗಿದ್ದರೆ ಅಲ್ಲಿನ ಅಭಿಮಾನಿಗಳು ಅವರನ್ನು ಯಾವ ರೀತಿ ಟೀಕೆ ಮಾಡುತ್ತಿದ್ದರು ಕಲ್ಪಿಸಿಕೊಳ್ಳಿ. ಅದೇ ಕಾರಣಕ್ಕೆ ಆರ್ ಸಿಬಿ ಆವತ್ತು ಒಬ್ಬನೇ ಆಟಗಾರನಿಗೆ ಅಷ್ಟು ದುಬಾರಿ ಮೊತ್ತ ಹೂಡಿಕೆ ಮಾಡಲು ಮುಂದಾಗಲಿಲ್ಲ’ ಎಂದು ಚಾರು ಶರ್ಮಾ ಹೇಳಿದ್ದಾರೆ.