ನವದೆಹಲಿ: ಉದ್ಯಮಿ ನೀರವ್ ಮೋದಿ ವಂಚನೆಯಿಂದಾಗಿ ಪಂಜಾಬ್ ಬ್ಯಾಂಕ್ ಸಾವಿರಾರು ಕೋಟಿ ರೂ. ಅವ್ಯವಹಾರ ಹಗರಣದಲ್ಲಿ ಕಳಂಕ ಮೈ ಮೇಲೆ ಎಳೆದುಕೊಂಡಿದ್ದು ನಿಮಗೆಲ್ಲಾ ಗೊತ್ತೇ ಇದೆ.
ಇದೀಗ ಅದೇ ಪಂಜಾಬ್ ಬ್ಯಾಂಕ್ ನ ಪ್ರಚಾರ ರಾಯಭಾರಿಯಾಗಿರುವ ವಿರಾಟ್ ಕೊಹ್ಲಿ ಹೆಸರು ಇದರ ನಡುವೆ ಕೇಳಿಬಂದಿದೆ. ಅವ್ಯವಹಾರ ಬಯಲಾಗುತ್ತಿದ್ದಂತೆ ಕೊಹ್ಲಿ ಈ ಬ್ಯಾಂಕ್ ನ ರಾಯಭಾರಿ ಸಂಬಂಧ ಕಡಿದುಕೊಂಡಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು.
ಅದಕ್ಕೀಗ ಸ್ವತಃ ಪಂಜಾಬ್ ಬ್ಯಾಂಕ್ ಸ್ಪಷ್ಟನೆ ನೀಡಿದ್ದು, ವಿರಾಟ್ ಕೊಹ್ಲಿ ರಾಯಭಾರಿಯಾಗಿಯೇ ಮುಂದುವರಿದಿದ್ದಾರೆ ಎಂದಿದೆ. ‘ಮಿ.ವಿರಾಟ್ ಕೊಹ್ಲಿ ನಮ್ಮ ಸಂಸ್ಥೆಯ ರಾಯಭಾರಿ ಹುದ್ದೆಯಿಂದ ಹಿಂದೆ ಸರಿದಿಲ್ಲ. ಈ ಬಗ್ಗೆ ಬಂದ ಸುದ್ದಿಗಳೆಲ್ಲಾ ಸುಳ್ಳು’ ಎಂದು ಬ್ಯಾಂಕ್ ಸ್ಪಷ್ಟನೆ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ