Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗೆ ತಮ್ಮ ಮುದ್ದಿನ ಮಡದಿ ಅನುಷ್ಕಾರನ್ನು ತಬ್ಬಿಕೊಂಡಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು ಭಾರೀ ವೈರಲ್ ಆಗಿತ್ತು.
ಅದಕ್ಕೀಗ ಅನುಷ್ಕಾ ಪ್ರತಿಕ್ರಿಯೆ ಕೊಟ್ಟಿದ್ದು ಹೃದಯ ಬೆಚ್ಚಗಾಗಿಸುವಂತಿದೆ. ವಿರಾಟ್ ಈ ಫೋಟೋ ಪ್ರಕಟಿಸುತ್ತಿದ್ದಂತೆ ಅರ್ಧಗಂಟೆಯಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಕೊಟ್ಟಿದ್ದರು. ಇಷ್ಟೆಲ್ಲಾ ಹಿಟ್ ಆದ ಮೇಲೆ ಅನುಷ್ಕಾ ಸುಮ್ಮನೇ ಕೂರುವುದ ಸರಿಯೇ?
ವಿರಾಟ್ ಫೋಟೋ ಜತೆಗೆ ‘ಮೈ ಒನ್ ಆಂಡ್ ಓನ್ಲೀ’ ಎಂದು ಬರೆದುಕೊಂಡಿದ್ದರು. ಅದಕ್ಕೀಗ ಅನುಷ್ಕಾ ‘ಐ ಮಿಸ್ ಯು ಟೂ ಮೈ ಲವ್’ ಎಂದು ಬರೆದು ಹೃದಯದ ಚಿಹ್ನೆ ಹಾಕಿ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಈ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಂಪುಟದ ಪ್ರೊಫೈಲ್ ಪಿಕ್ಚರ್ ಮಾಡಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ