Publish Date: Sun, 23 Apr 2023 (09:05 IST)
Updated Date: Sun, 23 Apr 2023 (09:07 IST)
ಬೆಂಗಳೂರು: ಐಪಿಎಲ್ ಆಡಲು ಬೆಂಗಳೂರಿಗೆ ಬಂದಿರುವ ರಾಯಲ್ ಚಾಲೆಂಜರ್ಸ್ ಆಟಗಾರ ವಿರಾಟ್ ಕೊಹ್ಲಿ ಮತ್ತು ಪತ್ನಿ, ನಟಿ ಅನುಷ್ಕಾ ಶರ್ಮಾ ಮಲ್ಲೇಶ್ವರಂನ ಸಿಟಿಆರ್ ನಲ್ಲಿ ಮಸಾಲೆ ದೋಸೆ ಸವಿದಿದ್ದಾರೆ.
ನಿನ್ನೆ ಸಂಜೆ ಸಿಟಿಆರ್ ಗೆ ತಮ್ಮ ಸಂಗಡಿಗರ ಜೊತೆ ಭೇಟಿ ಕೊಟ್ಟ ಕೊಹ್ಲಿ ದಂಪತಿ ಮಸಾಲೆ ದೋಸೆ, ಮಂಗಳೂರು ಬಜ್ಜಿ, ಖಾರಾ ಬಾತ್ ಸವಿದಿದ್ದಾರೆ.
ಅನುಷ್ಕಾ ಶರ್ಮಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸಿಟಿಆರ್ ನ ತಿಂಡಿ ತಮಗೆ ಸಖತ್ ಇಷ್ಟವಾಯ್ತು ಎಂದು ಬರೆದಿದ್ದಾರೆ. ಇನ್ನು, ಕೊಹ್ಲಿ ದಂಪತಿ ಬಂದ ಸುದ್ದಿ ಕೇಳಿ ಜನ ಜಮಾಯಿಸಿದ್ದು, ಸೆಲ್ಫೀಗಾಗಿ ಮುಗಿಬಿದ್ದರು.