Publish Date: Thu, 20 Apr 2023 (18:50 IST)
Updated Date: Thu, 20 Apr 2023 (19:15 IST)
ಮೊಹಾಲಿ: ಐಪಿಎಲ್ 2023 ರಲ್ಲಿ ಕಿಂಗ್ಸ್ ಇಲೆವೆನ್ ವಿರುದ್ಧ ನಡೆದ ಇಂದಿನ ಪಂದ್ಯದಲ್ಲಿ ಆರ್ ಸಿಬಿ ತಂಡವನ್ನು ವಿರಾಟ್ ಕೊಹ್ಲಿ ನಾಯಕರಾಗಿ ಮುನ್ನಡೆಸಿದ್ದಾರೆ.
ಆರ್ ಸಿಬಿ ತಂಡದ ಸುದೀರ್ಘ ಅವಧಿಯ ಕ್ಯಾಪ್ಟನ್ ಆಗಿದ್ದ ಕೊಹ್ಲಿ 2021 ರಲ್ಲಿ ನಾಯಕತ್ವಕ್ಕೆ ಗುಡ್ ಬೈ ಹೇಳಿ ಆಟಗಾರನಾಗಿ ಮುಂದುವರಿದಿದ್ದರು. ಆದಾದ ಬಳಿಕ ಫಾ ಡು ಪ್ಲೆಸಿಸ್ ತಂಡದ ನಾಯಕರಾಗಿದ್ದರು.
ಆದರೆ ಇಂದಿನ ಪಂದ್ಯಕ್ಕೆ ಫಾ ಡು ಪ್ಲೆಸಿಸ್ ಗಾಯದ ಕಾರಣದಿಂದ ಫೀಲ್ಡಿಂಗ್ ಗಿಳಿಯಲಿಲ್ಲ. ಅವರು ಕೇವಲ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟಿಂಗ್ ಮಾತ್ರ ಮಾಡಿದ್ದರು. ಪ್ಲೆಸಿಸ್ ಬದಲಿಗೆ ಕೊಹ್ಲಿ ತಂಡದ ನಾಯಕರಾಗುತ್ತಿದ್ದಂತೇ ಆರ್ ಸಿಬಿ ಫ್ಯಾನ್ಸ್ ಹಳೆಯ ದಿನಗಳಿಗೆ ಮರಳಿದರು. ಕೊಹ್ಲಿ ಇಂದು ನಾಯಕರಾಗಿ ಎರಡು ಸಕ್ಸಸ್ ಫುಲ್ ರಿವ್ಯೂ ಪಡೆದಿದ್ದಲ್ಲದೆ, ಎರಡು ರನೌಟ್ ಗೆ ಕಾರಣವಾಗಿದ್ದರು. ಹೀಗಾಗಿ ಹಳೆಯ ಆರ್ ಸಿಬಿ ಮತ್ತೆ ಮರಳಿದಂತಾಗಿದೆ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.