ಮುಂಬೈ: ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮದುವೆಯಾಗುವವರೆಗೆ ಅವರಿಬ್ಬರ ಮದುವೆಯ ಬಗ್ಗೆಯೇ ಸುದ್ದಿ ಹರಿದಾಡುತ್ತಿತ್ತು. ಇದೀಗ ಮದುವೆಯಾಗಿ ಮೂರೇ ತಿಂಗಳಿಗೆ ಅವರಿಬ್ಬರ ಮಗುವಿನ ಬಗ್ಗೆ ಗಾಸಿಪ್ ಹರಿದಾಡಲು ಪ್ರಾರಂಭವಾಗಿದೆ.
ಅದಕ್ಕೆಲ್ಲಾ ಕಾರಣವಾಗಿದ್ದು ಕೊಹ್ಲಿ ಮಾಡಿದ ಟ್ವೀಟ್. ‘ಸದ್ಯಕ್ಕೆ ಹಲವಾರು ವಿದ್ಯಮಾನಗಳು ನಡೆಯುತ್ತಿವೆ. ಶೀಘ್ರದಲ್ಲೇ ನಿಮಗೂ ತಲುಪಿಸುತ್ತೇವೆ’ ಎಂದು ಕೊಹ್ಲಿ ಮಾಡಿರುವ ಟ್ವೀಟ್ ನೋಡಿ ಅಭಿಮಾನಿಗಳು ಏನೇನೋ ಅಂದುಕೊಳ್ಳುತ್ತಿದ್ದಾರೆ.
ಕೆಲವರಂತೂ ‘ಅನುಷ್ಕಾ ಗರ್ಭಿಣಿಯೇ?’ ‘ಛೋಟಾ ಕೊಹ್ಲಿ ಸದ್ಯದಲ್ಲೇ ಬರಲಿದ್ದಾರೆಯೇ?’ ಎಂದು ಕೊಹ್ಲಿಗೆ ಕಾಮೆಂಟ್ ಮಾಡಿದ್ದಾರೆ. ಅಂತೂ ಮದುವೆ ವಿಚಾರ ಮುಗಿಯಿತು. ಇದೀಗ ಇಬ್ಬರ ಅಭಿಮಾನಿಗಳಿಗೆ ಮಗುವಿನದ್ದೇ ಚಿಂತೆ!
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ