ನಾಗ್ಪುರ: ಟೀಂ ಇಂಡಿಯಾದಲ್ಲಿ ಕಿರು ಮಾದರಿಯ ಕ್ರಿಕೆಟ್ ನಲ್ಲಿ ಇತ್ತೀಚೆಗೆ ಸ್ಥಾನ ಸಿಗದೇ ಒದ್ದಾಡುತ್ತಿರುವ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೊಸ ಅಸ್ತ್ರ ಕಲಿತುಕೊಂಡಿದ್ದಾರೆ.
ಆಫ್ ಸ್ಪಿನ್ನರ್ ಗಳಿಗೆ ಇತ್ತೀಚೆಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುವುದೇ ಕಷ್ಟವಾಗಿದೆ. ಲೆಗ್ ಸ್ಪಿನ್ನರ್ ಗಳಿಗೇ ಹೆಚ್ಚಿನ ಮನ್ನಣೆ ಸಿಗುತ್ತಿದೆ. ಇದೇ ಕಾರಣಕ್ಕೆ ಅಶ್ವಿನ್ ಇದೀಗ ಲೆಗ್ ಸ್ಪಿನ್ ಕರಗತ ಮಾಡಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಅಶ್ವಿನ್ ಲೆಗ್ ಸ್ಪಿನ್ ಬೌಲಿಂಗ್ ಕಲಿಯುತ್ತಿರುವ ಸುದ್ದಿ ಕೇಳಿಬಂದಿತ್ತು. ಅದನ್ನೀಗ ಅವರು ಇದೀಗ ನಡೆಯುತ್ತಿರುವ ಇರಾನಿ ಟ್ರೋಫಿ ಪಂದ್ಯಾವಳಿಯಲ್ಲಿ ಪ್ರಯೋಗ ಮಾಡಿದ್ದಾರೆ.
ಅವರ ಲೆಗ್ ಸ್ಪಿನ್ ಬೌಲಿಂಗ್ ಶೈಲಿ ಥೇಟ್ ಅನಿಲ್ ಕುಂಬ್ಳೆಯನ್ನೇ ನೆನಪಿಸುವಂತಿದೆ. ಆದರೆ ಇದುವರೆಗೆ 25 ಓವರ್ ಬೌಲಿಂಗ್ ಮಾಡಿರುವ ಅಶ್ವಿನ್ ಗೆ ದಕ್ಕಿದ್ದು ಒಂದೇ ವಿಕೆಟ್.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ