Publish Date: Wed, 02 Dec 2020 (09:23 IST)
Updated Date: Wed, 02 Dec 2020 (09:25 IST)
ಸಿಡ್ನಿ: ಮೊನ್ನೆಯಷ್ಟೇ ಅತೀ ವೇಗದ 22 ಸಾವಿರ ರನ್ ಪೂರೈಸಿದ ದಾಖಲೆ ಮಾಡಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ ಮತ್ತೊಂದು ದಾಖಲೆಯ ಹೊಸ್ತಿಲಲ್ಲಿದ್ದಾರೆ.
ಇಂದಿನ ಪಂದ್ಯದಲ್ಲಿ ಕೊಹ್ಲಿ 23 ರನ್ ಗಳಿಸಿದರೆ ಏಕದಿನ ಪಂದ್ಯಗಳಲ್ಲಿ ಅತೀ ವೇಗದ 12 ಸಾವಿರ ರನ್ ಪೂರೈಸಿದ ದಾಖಲೆ ಮಾಡಲಿದ್ದಾರೆ. ಇದಕ್ಕೂ ಮೊದಲು ಸಚಿನ್ ತೆಂಡುಲ್ಕರ್ 309 ಪಂದ್ಯಗಳಿಂದ 12 ಸಾವಿರ ರನ್ ಪೂರೈಸಿ ಮೊದಲ ಸ್ಥಾನದಲ್ಲಿದ್ದರು. ಆದರೆ ಕೊಹ್ಲಿ ಇದನ್ನು ಕೇವಲ 250 ಏಕದಿನ ಪಂದ್ಯಗಳಿಂದ ಪೂರ್ತಿ ಮಾಡಲಿದ್ದಾರೆ.