ಮುಂಬೈ: ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ಸದ್ಯದಲ್ಲೇ ತಾಯಿಯಾಗಲಿರುವ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. ಹಾಗಂತ ಅನುಷ್ಕಾ ಈ ಸಮಯದಲ್ಲೂ ನಾಜೂಕಾಗಿ ಏನೂ ಕುಳಿತಿಲ್ಲ.
ಗರ್ಭಿಣಿ ಅನುಷ್ಕಾ ಶೀರ್ಷಾಸನ ಯೋಗ ಮಾಡುವ ಫೋಟೋವೊಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ನೆಟ್ಟಿಗರು ಬೆರಗಾಗುವಂತೆ ಮಾಡಿದ್ದಾರೆ. ಅನುಷ್ಕಾ ಈ ಸಾಹಸಕ್ಕೆ ವಿರಾಟ್ ಬ್ಯಾಲೆನ್ಸ್ ಮಾಡಲು ಸಹಾಯ ಮಾಡಿದ್ದಾರೆ. ಅಲ್ಲದೆ, ಗರ್ಭಿಣಿಯಾಗಿದ್ದರೂ ತಾವು ಮೊದಲು ಮಾಡುತ್ತಿದ್ದ ಯೋಗಾಸನಗಳನ್ನೆಲ್ಲಾ ಮಾಡಬಹುದು ಎಂದು ವೈದ್ಯರು ಅನುಮತಿ ನೀಡಿದ್ದಾರೆ. ಹಾಗಾಗಿಯೇ ನನ್ನ ಯೋಗ ಶಿಕ್ಷಕರ ಮಾರ್ಗದರ್ಶನದೊಂದಿಗೆ, ನನ್ನ ಪತಿ ವಿರಾಟ್ ಸಹಾಯದೊಂದಿಗೆ ಶೀರ್ಷಾಸನ ಮಾಡಿದ್ದೇನೆ ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.