ಮುಂಬೈ: ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್ ಆಗಿದ್ದಾಗ ಅವರ ಮೇಲೆ ಅಸಮಾಧಾನಗೊಂಡಿದ್ದ ಕೊಹ್ಲಿ ಕುಂಬ್ಳೆ ರಾಜೀನಾಮೆಗೆ ಕಾರಣರಾಗಿದ್ದರು. ಆದರೆ ಇದೀಗ ಕೊಹ್ಲಿ ಕುಂಬ್ಳೆ ಹಾದಿಯಲ್ಲೇ ನಡೆದಿದ್ದಾರೆ.
ಟೀಂ ಇಂಡಿಯಾ ಕೋಚ್ ಆಗಿದ್ದಾಗ ಬಿಸಿಸಿಐ ಸಮಿತಿ ಎದುರು ವಾದ ಮಂಡಿಸಿದ್ದ ಕುಂಬ್ಳೆ, ಕೋಚ್ ಮತ್ತು ಕ್ಯಾಪ್ಟನ್ ಗೆ ಹೆಚ್ಚಿನ ವೇತನ ಹಾಗೂ ಇತರ ಆಟಗಾರರ ವೇತನವನ್ನೂ ಹೆಚ್ಚಿಸಬೇಕೆಂದು ಪ್ರತಿಪಾದಿಸಿದ್ದರು.
ಆದರೆ ಕುಂಬ್ಳೆ ಕಾಲಾವಧಿಯಲ್ಲಿ ಇದು ನಡೆಯಲೇ ಇಲ್ಲ. ಇದೀಗ ವಿರಾಟ್ ಕೊಹ್ಲಿ ಬಿಸಿಸಿಐ ಮುಂದೆ ಮತ್ತೆ ಈ ವಿಷಯ ಪ್ರಸ್ತಾಪಿಸಲು ಸಜ್ಜಾಗಿದ್ದು, ಎಲ್ಲಾ ಆಟಗಾರರ ವೇತನ ಹೆಚ್ಚಿಸಲು ಮನವಿ ಮಾಡಲಿದ್ದಾರೆ. ಇದಕ್ಕೆ ಹಾಲಿ ಕೋಚ್ ರವಿಶಾಸ್ತ್ರಿ ಬೆಂಬಲವೂ ಇದೆ ಎನ್ನಲಾಗಿದೆ. ಈ ಮೂಲಕ ಅಂದು ಕುಂಬ್ಳೆ ನಾಂದಿ ಹಾಡಿದ್ದ ಕೆಲಸಕ್ಕೆ ಇಂದು ಕೊಹ್ಲಿ ಪೂರ್ಣ ವಿರಾಮ ಹಾಕಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ