ನಾಗ್ಪುರ: ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ಗಾಗಿ ತನ್ನ ಆರಂಭಿಕ ಸ್ಥಾನ ಬಿಟ್ಟುಕೊಟ್ಟು, ಮಧ್ಯಮ ಕ್ರಮಾಂಕದಲ್ಲಿ ಏಗಲು ಆಗದೆ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ತಂಡದಿಂದಲೇ ಔಟ್ ಆದರು. ಇದೀಗ ಟೆಸ್ಟ್ ನಲ್ಲೂ ರಾಹುಲ್ ಗೆ ಅದೇ ಗತಿ ಬರುತ್ತಾ?
ಏಕದಿನ ಕ್ರಿಕೆಟ್ ನಲ್ಲಿ ಆದ ಗತಿಯೇ ರಾಹುಲ್ ಗೆ ಟೆಸ್ಟ್ ಕ್ರಿಕೆಟ್ ನಲ್ಲೂ ಆದರೆ ಅಚ್ಚರಿಯಿಲ್ಲ. ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ಶಿಖರ್ ಧವನ್ ಮುಂದಿನ ಪಂದ್ಯದಿಂದ ತಂಡದಲ್ಲಿರುತ್ತಾರೆ. ಜತೆಗೆ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅವಕಾಶ ಪಡೆದಿದ್ದ ಮುರಳಿ ವಿಜಯ್, ರೋಹಿತ್ ಶರ್ಮಾ ಶತಕ ಭಾರಿಸಿ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.
ಹಾಗಾಗಿ ಯಾರನ್ನು ತೆಗೆಯುವುದು, ಯಾರನ್ನು ಉಳಿಸಿಕೊಳ್ಳುವುದು ಎಂಬ ಪ್ರಶ್ನೆ ಬಂದಾಗ ಮೊದಲ ಇನಿಂಗ್ಸ್ ನಲ್ಲಿ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿರದ ರಾಹುಲ್ ಮೇಲೆ ನಾಯಕ ಕೊಹ್ಲಿ ಕಣ್ಣು ಬೀಳುವ ಸಾಧ್ಯತೆಯಿದೆ. ಹೀಗಾದಲ್ಲಿ ಪ್ರತಿಭಾವಂತ ರಾಹುಲ್ ಟೆಸ್ಟ್ ಕ್ರಿಕೆಟ್ ನಲ್ಲೂ ಬೆಂಚ್ ಕಾಯಿಸಬೇಕಾಗಬಹುದು.
ಅತ್ತ ದೊಡ್ಡಇನಿಂಗ್ಸ್ ಆಡಲು ವಿಫಲವಾಗುತ್ತಿರುವುದು ಒಂದೆಡೆಯಾದರೆ, ತಂಡದಲ್ಲಿ ಇನ್ನೊಬ್ಬರಿಗಾಗಿ ‘ತ್ಯಾಗ’ರಾಜನಾಗಬೇಕಾದ ಅನಿವಾರ್ಯತೆ. ಒಟ್ಟಾರೆ ರಾಹುಲ್ ಭವಿಷ್ಯ ಕಷ್ಟ… ಕಷ್ಟ..
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ