Publish Date: Sat, 02 Dec 2017 (09:10 IST)
Updated Date: Sat, 02 Dec 2017 (09:13 IST)
ದೆಹಲಿ: ಮುಂಬರುವ ದ.ಆಫ್ರಿಕಾ ಪ್ರವಾಸಕ್ಕೆ ಹೊಂದಿಕೊಳ್ಳಲು ಪ್ರಸಕ್ತ ಲಂಕಾ ಸರಣಿಯಲ್ಲಿ ಹಸಿರು ಹುಲ್ಲಿನ ಪಿಚ್ ನಿರ್ಮಿಸುತ್ತಿದ್ದೇವೆಂಬ ಟೀಂ ಇಂಡಿಯಾ ಮತ್ತು ಬಿಸಿಸಿಐ ಹೇಳಿಕೆಯನ್ನು ಲಂಕಾ ನಾಯಕ ದಿನೇಶ್ ಚಂಡಿಮಾಲ್ ಲೇವಡಿ ಮಾಡಿದ್ದಾರೆ.
ಕೋಲ್ಕೊತ್ತಾ ಟೆಸ್ಟ್ ಪಂದ್ಯ ನಡೆದಿದ್ದು ವೇಗದ ಪಿಚ್ ನಲ್ಲಿ ಎಂದರೆ ಒಪ್ಪಬಹುದು. ಆದರೆ ನಾಗ್ಪುರ ಮತ್ತು ಇಲ್ಲಿನ (ದೆಹಲಿ) ಪಿಚ್ ನೋಡಿದರೆ ಹಾಗನಿಸುತ್ತಿಲ್ಲ. ಈ ಪಿಚ್ ಆಫ್ರಿಕಾ ಸರಣಿಗೆ ತಯಾರಿ ನಡೆಸಲು ಮಾಡಿದ ಪಿಚ್ ಎಂದರೆ ತಮಾಷೆ ಎನಿಸುತ್ತದೆ ಎಂದು ದಿನೇಶ್ ಲೇವಡಿ ಮಾಡಿದ್ದಾರೆ.
ತಮ್ಮ ತಂಡ ಸರಣಿಯಲ್ಲಿ 1-0 ಯಿಂದ ಹಿನ್ನಡೆ ಪಡೆದಿರುವ ಕಾರಣ ಇಂದಿನ ಟೆಸ್ಟ್ ಮೇಲೆ ಸಂಪೂರ್ಣವಾಗಿ ಗಮನ ಕೇಂದ್ರೀಕರಿಸಿರುವುದಾಗಿ ಹೇಳಿರುವ ದಿನೇಶ್, ‘ನಾವು ಈಗ ನಡೆಯುತ್ತಿರುವ ಟೆಸ್ಟ್ ಸರಣಿ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ. ಆದರೆ ಭಾರತ ಈ ಸರಣಿ ಬಿಟ್ಟು, ಮುಂಬರುವ ಟೆಸ್ಟ್ ಮೇಲೇ ಗಮನ ಹರಿಸಿದಂತಿದೆ’ ಎಂದು ಕಾಲೆಳೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ