Publish Date: Wed, 05 Aug 2020 (12:18 IST)
Updated Date: Wed, 05 Aug 2020 (12:20 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶ್ರೀಮಂತಿಕೆಯಲ್ಲಿ ವಿಶ್ವದ ಟಾಪ್ ಸೆಲೆಬ್ರಿಟಿಗಳಲ್ಲಿ ಒಬ್ಬ. ಆದರೆ ಅವರು ಮನೆಯಲ್ಲಿದ್ದಾಗ ನಮ್ಮ ನಿಮ್ಮಂತೆ ಮನೆ ಕೆಲಸ ಮಾಡ್ತಾರಾ? ಈ ಪ್ರಶ್ನೆಗೆ ಪತ್ನಿ ಅನುಷ್ಕಾ ಶರ್ಮಾ ಉತ್ತರಿಸಿದ್ದಾರೆ.
ಅನುಷ್ಕಾಗೆ ಇನ್ ಸ್ಟಾಗ್ರಾಂ ಚ್ಯಾಟ್ ವೇಳೆ ಕೊಹ್ಲಿಗೆ ಈಗ ಮನೆಯಲ್ಲಿ ಯಾವ ಕೆಲಸ ಕೊಡ್ತಿದ್ದೀರಿ ಎಂದು ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಅನುಷ್ಕಾ ಅಷ್ಟೇ ತಮಾಷೆಯಾಗಿ ಉತ್ತರಿಸಿದ್ದಾರೆ.
‘ಟೈಟ್ ಆಗಿರೋ ಡಬ್ಬದ ಮುಚ್ಚಳ ತೆಗೆಯೋದು, ಭಾರದ ಚೇರ್, ಟೇಬಲ್ ಎತ್ತೋದು ಇತ್ಯಾದಿ ಕೆಲಸ ಕೊಡ್ತಿದ್ದೇನೆ’ ಎಂದು ಅನುಷ್ಕಾ ತಮಾಷೆಯಾಗಿ ಉತ್ತರಿಸಿದ್ದಾರೆ.