Publish Date: Wed, 05 Aug 2020 (11:22 IST)
Updated Date: Wed, 05 Aug 2020 (11:24 IST)
ಮುಂಬೈ: ಐಪಿಎಲ್ 13 ರ ಪ್ರಾಯೋಜಕತ್ವ ಹೊಂದಿದ್ದ ಚೀನಾ ಮೂಲದ ವಿವೋ ಸಂಸ್ಥೆ ಕೊನೆಯ ಕ್ಷಣದಲ್ಲಿ ಪ್ರಾಯೋಜಕತ್ವದಿಂದ ಹಿಂದೆ ಸರಿದ ಬಗ್ಗೆ ಟ್ವಿಟರಿಗರು ಸ್ವಾರಸ್ವ್ಯಕರ ಚರ್ಚೆ ನಡೆಸಿದ್ದಾರೆ.
ಟೀಕೆಗಳ ಬೆನ್ನಲ್ಲೇ ಸ್ವತಃ ವಿವೋ ಸಂಸ್ಥೆಯೇ ಪ್ರಾಯೋಜಕತ್ವದಿಂದ ಹಿಂದೆ ಸರಿದ ಬಗ್ಗೆ ಕ್ರಿಕೆಟ್ ಶೈಲಿಯಲ್ಲಿ ಕಾಮೆಂಟ್ ಮಾಡಿರುವ ನೆಟ್ಟಿಗರು ಕೊನೆಯ ಕ್ಷಣದಲ್ಲಿ ರನೌಟ್ ಆಗಲು ತೆರೆಮರೆಯಲ್ಲಿ ಕೇಂದ್ರ ಅಥವಾ ಬಿಸಿಸಿಐ ಒತ್ತಡದ ತಂತ್ರ ಹೆಣೆದಿತ್ತೇ ಎಂದು ಚರ್ಚೆ ನಡೆಸಿದ್ದಾರೆ.
ಇನ್ನು ಕೆಲವರು ಅಂತೂ ಇನ್ನು ಐಪಿಎಲ್ ನ್ನು ಆರಾಮವಾಗಿ ನೋಡಬಹುದು. ಚೀನಾ ಕಂಪನಿ ಪ್ರಾಯೋಜಕತ್ವದಿಂದ ಹಿಂದೆ ಸರಿದಿರುವುದರಿಂದ ಬಿಸಿಸಿಐಗೂ ನಿರಾಳ ಎಂದು ಕಾಮೆಂಟ್ ಮಾಡಿದ್ದಾರೆ.