Publish Date: Fri, 02 Feb 2018 (09:54 IST)
Updated Date: Fri, 02 Feb 2018 (09:56 IST)
ಡರ್ಬನ್: ಧೋನಿ ಡಿಆರ್ ಎಸ್ ಬಗ್ಗೆ ಎಷ್ಟು ಕರಾರುವಾಕ್ ಎನ್ನುವುದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ಕೆಲವರು ಡಿಆರ್ ಎಸ್ ಎಂದರೆ ಧೋನಿ ರಿವ್ಯೂ ಸಿಸ್ಟಂ ಎಂದು ಹೇಳುತ್ತಾರೆ.
ಹಲವು ಬಾರಿ ವಿರಾಟ್ ಕೊಹ್ಲಿಗೆ ಡಿಆರ್ ಎಸ್ ತೆಗೆದುಕೊಳ್ಳಬೇಕೋ ಬೇಡವೋ ಎಂಬ ಬಗ್ಗೆ ಧೋನಿ ಕರೆಕ್ಟಾಗಿ ಸಲಹೆ ನೀಡುತ್ತಾರೆ. ಧೋನಿ ಲೆಕ್ಕಾಚಾರ ಹೆಚ್ಚಾಗಿ ತಪ್ಪುವುದಿಲ್ಲ. ಆದರೆ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಧೋನಿ ಸಲಹೆ ಪಾಲಿಸದೇ ಕೊಹ್ಲಿ ತಪ್ಪು ಮಾಡಿದರು!
ದ.ಆಫ್ರಿಕಾ ಬ್ಯಾಟಿಂಗ್ ಮಾಡುತ್ತಿದ್ದಾಗ 36 ನೇ ಓವರ್ ನಲ್ಲಿ ಈ ಘಟನೆ ನಡೆದಿದೆ. ಜಸ್ಪ್ರೀತ್ ಬುಮ್ರಾ ಎಸೆದ ಎಸೆತವನ್ನು ಅಂಪಾಯರ್ ವೈಡ್ ಎಂದು ತೀರ್ಪಿತ್ತರು. ಆದರೆ ರೋಹಿತ್ ಶರ್ಮಾ ಗ್ಲೌಸ್ ಗೆ ಬಾಲ್ ತಾಗಿದ್ದಾಗಿ ಹೇಳಿ ಕೊಹ್ಲಿಗೆ ಡಿಆರ್ ಎಸ್ ತೆಗೆದುಕೊಳ್ಳಲು ಸೂಚಿಸಿದರು. ಈ ಸಂದರ್ಭದಲ್ಲಿ ಧೋನಿ ಮತ್ತು ಬೌಲರ್ ಬುಮ್ರಾ ಮಾತನ್ನು ಕೊಹ್ಲಿ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ.
ರಿಪ್ಲೇ ನೋಡಿದಾಗ ಗ್ಲೌಸ್ ಗೆ ಬಾಲ್ ತಾಗಿರಲೇ ಇಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಅಲ್ಲಿಗೆ ಭಾರತದ ಪಾಲಿಗಿದ್ದ ಏಕೈ ರಿವ್ಯೂ ಕೂಡಾ ತಪ್ಪಿ ಹೋಯ್ತು. ಧೋನಿ ಸಲಹೆ ಕೇಳದೇ ಕೊಹ್ಲಿ ತಪ್ಪು ಮಾಡಿದರು!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ