Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚೇಸಿಂಗ್ ಸಿಕ್ಕೊಡನೆ ವಿರಾಟ್ ಕೊಹ್ಲಿಗೆ ಬ್ರೇಕ್ ಹಾಕೋರೇ ಇಲ್ಲ!

ಚೇಸಿಂಗ್ ಸಿಕ್ಕೊಡನೆ ವಿರಾಟ್ ಕೊಹ್ಲಿಗೆ ಬ್ರೇಕ್ ಹಾಕೋರೇ ಇಲ್ಲ!
ಡರ್ಬನ್ , ಶುಕ್ರವಾರ, 2 ಫೆಬ್ರವರಿ 2018 (08:20 IST)
ಡರ್ಬನ್: ಪಿಚ್ ಯಾವುದೇ ಇರಲಿ, ಚೇಸಿಂಗ್ ಮಾಡುವ ಅವಕಾಶ ಸಿಕ್ಕೊಡನೆ ವಿರಾಟ್ ಕೊಹ್ಲಿ ಮೈಯೆಲ್ಲಿ ಎಕ್ಸ್ ಟ್ರಾ ಪವರ್ ಹರಿಯುತ್ತದೆ. ಭಾರತ ಮತ್ತ ದ.ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲೂ ಅದೇ ಆಗಿದೆ. ಪರಿಣಾಮ ಭಾರತಕ್ಕೆ 6 ವಿಕೆಟ್ ಗಳ ಭರ್ಜರಿ ಗೆಲುವು ಸಿಕ್ಕಿದೆ.
 

ಮತ್ತೊಂದು ಶತಕ ಜಮಾಯಿಸಿದ ನಾಯಕ ಕೊಹ್ಲಿ ಭಾರತದ ಗೆಲುವಿಗೆ ಅಜಿಂಕ್ಯಾ ರೆಹಾನೆ ಜತೆಗೂಡಿ ತಾವೇ  ವೇದಿಕೆ ನಿರ್ಮಿಸಿದರು. ರೆಹಾನೆ ಜತೆಗೂಡಿ ಮೂರನೇ ವಿಕೆಟ್ ಗೆ ದಾಖಲೆಯ 189 ರನ್ ಕಲೆ ಹಾಕಿದರು. ಇದರಲ್ಲಿ ಕೊಹ್ಲಿ ಪಾಲು112, ರೆಹಾನೆ ಅವರದ್ದು ಅಮೋಘ 79 ರನ್. ದರದೃಷ್ಟವಶಾತ್ ಗೆಲುವಿನ ಸಮೀಪದಲ್ಲಿದ್ದಾಗ ಸಣ್ಣ ತಪ್ಪು ಮಾಡಿ ರೆಹಾನೆ ವಿಕೆಟ್ ಕಳೆದುಕೊಂಡರು. ನಂತರ ಬಂದ ಧೋನಿ ಗೆಲುವಿನ ಔಪಚಾರಿಕತೆ ಪೂರೈಸಿದರು.

ವಿಶೇಷವೆಂದರೆ ಇದೇ ಮೊದಲ ಬಾರಿಗೆ ಭಾರತ 5 ಓವರ್ ಗಳವರೆಗೆ ವಿಕೆಟ್ ಕಳೆದುಕೊಳ್ಳದೇ ಉತ್ತಮ ಆರಂಭ ಪಡೆದಿತ್ತು. ಆದರೆ ರೋಹಿತ್ 20 ರನ್ ಗಳಿಸಿ ಔಟಾದರೆ ಶಿಖರ್ ಧವನ್ ಕೊಹ್ಲಿ ಜತೆ ವಿಕೆಟ್ ನಡುವೆ ಓಡುವಾಗ ಹೊಂದಾಣಿಕೆ ಕೊರತೆಯಿಂದ 35 ರನ್ ಗೆ ವಿಕೆಟ್ ಒಪ್ಪಿಸಿದರು.

ದ.ಆಫ್ರಿಕಾ ನಾಯಕ ಫಾ ಡು ಪ್ಲೆಸಿಸ್ ಕೂಡಾ ತಮ್ಮ ತಂಡದ ಪರ ಶತಕ (120) ಗಳಿಸಿದ್ದರು. ಹಾಗಿದ್ದರೂ ಅತಿಥೇಯ ತಂಡ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 269 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಚಿನಾಮನ್ ಬೌಲರ್ ಕುಲದೀಪ್ ಯಾದವ್ 3 ವಿಕೆಟ್ ಕಬಳಿಸಿದರು. ಇದರೊಂದಿಗೆ 6 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದಿಂದ ಮುನ್ನಡೆ ಸಾಧಿಸಿತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ದ.ಆಫ್ರಿಕಾ ಏಕದಿನ: ಕೊಹ್ಲಿಗೆ ಸಿಕ್ತು ಚೇಸಿಂಗ್ ಚಾನ್ಸ್!