ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಇದೇ ಮೊದಲ ಬಾರಿಗೆ ಮಗುಳು ವಮಿಕಾ ಜೊತೆ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.
ಪುಣೆಯಲ್ಲಿ ಏಕದಿನ ಸರಣಿ ಆಡಲು ಬಂದಿಳಿದಿರುವ ವಿರಾಟ್, ಪತ್ನಿ ಅನುಷ್ಕಾ-ಮಗಳು ವಮಿಕಾರನ್ನೂ ಕರೆತಂದಿದ್ದಾರೆ. ಈ ವೇಳೆ ಈ ಸ್ಟಾರ್ ಜೋಡಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.
ಅನುಷ್ಕಾ ವಮಿಕಾರನ್ನು ಹಿಡಿದುಕೊಂಡಿದ್ದರೆ, ವಿರಾಟ್ ಅವರ ಲಗೇಜ್ ಜೊತೆಗೆ ಅವರಿಗೆ ಸಾಥ್ ನೀಡಿದ್ದಾರೆ. ಆದರೆ ಈ ಬಾರಿಯೂ ವಮಿಕಾ ಮುಖದರ್ಶನವಾಗಿಲ್ಲ. ಟೆಸ್ಟ್, ಟಿ20 ಸರಣಿ ವೇಳೆಯೂ ಅನುಷ್ಕಾ-ವಮಿಕಾ ವಿರಾಟ್ ಕೊಹ್ಲಿ ಜೊತೆಗೆ ಅಹಮ್ಮದಾಬಾದ್ ನಲ್ಲಿದ್ದರು.